ಪುಣೆ: ಬಾಂಗ್ಲಾದೇಶದ ವಿರುದ್ಧದ ಪಂದ್ಯದ ವೇಳೆ ಬೌಲಿಂಗ್ ಮಾಡುವಾಗ ಜಾರಿ ಬಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಆರೋಗ್ಯದ ಬಗ್ಗೆ ನಾಯಕ ರೋಹಿತ್ ಶರ್ಮಾ ಅಪ್ ಡೇಟ್ ನೀಡಿದ್ದಾರೆ.
ಬಾಂಗ್ಲಾ ವಿರುದ್ಧದ ಪಂದ್ಯವನ್ನು ಗೆದ್ದ ಬಳಿಕ ಮಾತನಾಡಿರುವ ರೋಹಿತ್ ಹಾರ್ದಿಕ್ ಗಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಕೊಂಚ ಗಾಯವಾಗಿರುವುದು ನಿಜ. ಆದರೆ ಗಾಯ ಗಂಭೀರವಲ್ಲ. ಹೀಗಾಗಿ ಮುಂದಿನ ಪಂದ್ಯಕ್ಕೆ ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದಿದ್ದಾರೆ.
ನಿನ್ನೆ ತಮ್ಮ ಬೌಲಿಂಗ್ ಕೋಟಾದ ಮೊದಲ ಓವರ್ ಬೌಲಿಂಗ್ ಮಾಡುವಾಗ ಹಾರ್ದಿಕ್ ಜಾರಿ ಬಿದ್ದು ಕಾಲಿಗೆ ಏಟು ಮಾಡಿಕೊಂಡಿದ್ದರು. ಪರಿಣಾಮ ತಕ್ಷಣವೇ ಅವರನ್ನು ಸ್ಕ್ಯಾನಿಂಗ್ ಗೆ ಕಳುಹಿಸಲಾಗಿತ್ತು. ಆದರೆ ಟೀಂ ಇಂಡಿಯಾ ಪಂದ್ಯ ಮುಗಿಸುವುದರೊಳಗೆ ಹಾರ್ದಿಕ್ ಮರಳಿ ಪೆವಿಲಿಯನ್ ನಲ್ಲಿ ಕುಳಿತಿದ್ದರು.