Publish Date: Wed, 06 Dec 2023 (08:20 IST)
Updated Date: Wed, 06 Dec 2023 (08:40 IST)
ಮುಂಬೈ: ಏಕದಿನ ವಿಶ್ವಕಪ್ ನಲ್ಲಿ ಬೌಲಿಂಗ್ ಮಾಡುವಾಗ ಜಾರಿ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಕಮ್ ಬ್ಯಾಕ್ ಯಾವಾಗ ಎಂದು ತಿಳಿದುಬಂದಿದೆ.
ಕಾಲಿನ ಗಾಯದಿಂದಾಗಿ ಹಾರ್ದಿಕ್ ವಿಶ್ವಕಪ್ ಪಂದ್ಯಾವಳಿ ವೇಳೆ ಅರ್ಧಕ್ಕೇ ತಂಡದಿಂದ ಹೊರಬರಬೇಕಾಯಿತು. ಬಳಿಕ ಮುಂಬರುವ ದ.ಆಫ್ರಿಕಾ ಸರಣಿಗೂ ಅವರು ಆಯ್ಕೆಯಾಗಿಲ್ಲ.
ಇದೀಗ ಹಾರ್ದಿಕ್ 18 ವಾರ ಕ್ರಿಕೆಟ್ ನಿಂದ ದೂರವುಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಹಾರ್ದಿಕ್ ರನ್ನು ಸಂಪೂರ್ಣ ಫಿಟ್ ಮಾಡಲು ಎನ್ ಸಿಎ 18 ವಾರಗಳ ಯೋಜನೆ ಹಾಕಿಕೊಂಡಿದೆ.
ಹೀಗಾಗಿ ಮುಂದಿನ ವರ್ಷ ಮಾರ್ಚ್ ವರೆಗೂ ಹಾರ್ದಿಕ್ ಕ್ರಿಕೆಟ್ ನಿಂದ ದೂರುವುಳಿಯಲಿದ್ದಾರೆ. ಏಪ್ರಿಲ್ ನಲ್ಲಿ ಐಪಿಎಲ್ ನಡೆಯಲಿದ್ದು, ಆ ವೇಳೆ ಕ್ರಿಕೆಟ್ ಕಣಕ್ಕೆ ಮರಳುವ ಸಾಧ‍್ಯತೆಯಿದೆ. ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಹಾರ್ದಿಕ್ ಫಿಟ್ ಆಗಿರುವುದು ತುಂಬಾ ಮುಖ್ಯ. ಹೀಗಾಗಿ ಎನ್ ಸಿಎ ಹಾರ್ದಿಕ್ ಫಿಟ್ನೆಸ್ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ.