ನವದೆಹಲಿ: ಐಪಿಎಲ್ 2024 ರ ವೇಳೆಗೆ ಕ್ರಿಕೆಟ್ ಕಣಕ್ಕೆ ಮರಳಲು ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಸತತ ಪ್ರಯತ್ನ ನಡೆಸುತ್ತಿದ್ದಾರೆ.
ರಸ್ತೆ ಅಪಘಾತದಿಂದಾಗಿ ರಿಷಬ್ ಪಂತ್ ಕಳೆದ ಒಂದು ವರ್ಷದಿಂದ ಕ್ರಿಕೆಟ್ ನಿಂದ ದೂರವಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್ ಅಂತ್ಯಕ್ಕೆ ಪಂತ್ ರಸ್ತೆ ಅಪಘಾತದಲ್ಲಿ ಕಾಲು ಮುರಿತಕ್ಕೊಳಗಾಗಿದ್ದರು.
ಶಸ್ತ್ರಚಿಕಿತ್ಸೆಗೊಳಗಾಗಿದ್ದ ಅವರು ಆರೇ ತಿಂಗಳಲ್ಲಿ ಚೇತರಿಸಿಕೊಂಡು ಅಭ್ಯಾಸಕ್ಕೆ ಮರಳಿದ್ದರು. ಪ್ರದರ್ಶನ ಪಂದ್ಯವೊಂದರಲ್ಲಿ ಕೆಲಹೊತ್ತು ಬ್ಯಾಟಿಂಗ್ ಮಾಡಿಯೂ ಗಮನ ಸೆಳೆದಿದ್ದರು.
ಇದೀಗ ಐಪಿಎಲ್ 2024 ರಲ್ಲಿ ಸಕ್ರಿಯ ಕ್ರಿಕೆಟ್ ಗೆ ಮರಳುವ ಗುರಿ ಹಾಕಿಕೊಂಡಿರುವ ರಿಷಬ್ ಅದಕ್ಕಾಗಿ ಸತತ ಪರಿಶ್ರಮ ಪಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿರುವ ರಿಷಬ್ ಕಮ್ ಬ್ಯಾಕ್ ಗೆ ಅಭಿಮಾನಿಗಳು ಕಾದಿದ್ದಾರೆ.