Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಹಾರ್ದಿಕ್ ಪಾಂಡ್ಯಗೆ ಮುಂಬೈ ನಾಯಕತ್ವ, ರೋಹಿತ್ ಕತೆಯೇನು?

ಐಪಿಎಲ್ 2024: ಹಾರ್ದಿಕ್ ಪಾಂಡ್ಯಗೆ ಮುಂಬೈ ನಾಯಕತ್ವ, ರೋಹಿತ್ ಕತೆಯೇನು?
ಮುಂಬೈ , ಗುರುವಾರ, 30 ನವೆಂಬರ್ 2023 (09:50 IST)
Photo Courtesy: Twitter
ಮುಂಬೈ: ಐಪಿಎಲ್ 2024 ರಲ್ಲಿ ಹಾರ್ದಿಕ್ ಪಾಂಡ್ಯ ಮರಳಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಕತೆಯೇನು ಎಂಬ ಪ್ರಶ್ನೆ ಮೂಡಿದೆ.

ಎರಡು ಸೀಸನ್ ಗಳ ಬಳಿಕ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಆ ವೇಳೆ ಯುವ ತಂಡ ಕಟ್ಟುವ ಇರಾದೆ ಎಲ್ಲಾ ಫ್ರಾಂಚೈಸಿಗಳಿಗಿದೆ. ಹೀಗಾಗಿ ಈಗಿಂದಲೇ ಅದಕ್ಕೆ ತಯಾರಿ ನಡೆಸಲಾಗುತ್ತಿದೆ.

ಆ ನಿಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ಗೆ ಹಾರ್ದಿಕ್ ಪಾಂಡ್ಯ ನಾಯಕರಾಗಬಹುದು. ಹೀಗಾದಲ್ಲಿ ರೋಹಿತ್ ಆಟಗಾರನಾಗಿ ಮುಂದುವರಿಯಬಹುದು. ಹೇಗಿದ್ದರೂ ಹಾರ್ದಿಕ್ ಕೂಡಾ ನಾಯಕನಾಗಿ ಕ್ಲಿಕ್ ಆಗಿರುವುದರಿಂದ ಅವರನ್ನು ಮರಳಿ ಮುಂಬೈಗೆ ಇದೇ ಕಾರಣಕ್ಕೆ ಕರೆಸಿಕೊಳ್ಳಲಾಗಿದೆ ಎಂಬ ಮಾತುಗಳಿವೆ.

ಹೀಗಾದಲ್ಲಿ ರೋಹಿತ್ ಈ ಬಾರಿ ಹಿರಿಯ ಆಟಗಾರನಾಗಿ ಹಾರ್ದಿಕ್ ಗೆ ಮಾರ್ಗದರ್ಶನ ನೀಡಬಹುದು. ಹಾರ್ದಿಕ್ ನಾಯಕರಾಗಿ ತಂಡ ಮುನ್ನಡೆಸಬಹುದು. ಇದರಿಂದ ರೋಹಿತ್ ಗೂ ತಮ್ಮ ಆಟದ ಮೇಲೆ ನಿಗಾ ವಹಿಸಲು ಸುಲಭವಾಗಿಲದೆ.

Share this Story:

Follow Webdunia kannada

ಮುಂದಿನ ಸುದ್ದಿ

Rahul Dravid: ಆರ್ ಸಿಬಿ ಕಾರ್ಯಕ್ರಮದಲ್ಲಿ ರಾಹುಲ್ ದ್ರಾವಿಡ್: ಬ್ಯಾಟಿಂಗ್ ಕೋಚ್ ಆಗಿ ಎಂದು ಫ್ಯಾನ್ಸ್ ಸಲಹೆ