Select Your Language

Notifications

webdunia
webdunia
webdunia
webdunia

ಐಪಿಎಲ್ 2024 ರಲ್ಲಿ ಕೆಕೆಆರ್ ಸೇರಿಕೊಳ್ಳಲಿದ್ದಾರಾ ಯಶಸ್ವಿ ಜೈಸ್ವಾಲ್?

ಯಶಸ್ವಿ ಜೈಸ್ವಾಲ್
ಮುಂಬೈ , ಮಂಗಳವಾರ, 28 ನವೆಂಬರ್ 2023 (09:40 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಟೀಂ ಇಂಡಿಯಾ ಬ್ಯಾಟಿಗ ಯಶಸ್ವಿ ಜೈಸ್ವಾಲ್ ಐಪಿಎಲ್ 2024 ರಲ್ಲಿ ಕೆಕೆಆರ್ ತಂಡ ಸೇರಿಕೊಳ್ಳಲಿದ್ದಾರೆಯೇ?

ಯಶಸ್ವಿ ಜೈಸ್ವಾಲ್ ಸದ್ಯಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದಾರೆ. ಆದರೆ ಮುಂದೆ ಅವರು ಮಿನಿ ಹರಾಜಿನಲ್ಲಿ ಕೆಕೆಆರ್ ಗೆ ಬಿಕರಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಜೈಸ್ವಾಲ್ ಗೆ ಯಾವುದೇ ತಂಡವಾದರೂ ಸದ್ಯದ ಪರಿಸ್ಥಿತಿಯಲ್ಲಿ ಬಿಡ್ ಮಾಡಬಹುದು. ಇತ್ತೀಚೆಗಷ್ಟೇ ಜೈಸ್ವಾಲ್ ಕೆಕೆಆರ್ ತಂಡವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡಲು ಆರಂಭಿಸಿದ್ದಾರೆ. ಹೀಗಾಗಿ ಅವರು ಕೆಕೆಆರ್ ಸೇರಿಕೊಳ್ಳಬಹುದು ಎಂಬ ಅನುಮಾನ ಹುಟ್ಟಿದೆ.

ಡಿಸೆಂಬರ್ 19 ರಂದು ಐಪಿಎಲ್ 2024 ಕ್ಕೆ ಮಿನಿ ಹರಾಜು ಪ್ರಕ್ರಿಯೆ ದುಬೈನಲ್ಲಿ ನಡೆಯಲಿದೆ. ಅದಕ್ಕೆ ಮೊದಲು ಈಗಾಗಲೇ ಎಲ್ಲಾ ತಂಡಗಳೂ ತಮ್ಮ ರಿಲೀಸ್ ಮಾಡುವ ಮತ್ತು ಉಳಿಸಿಕೊಳ್ಳುವ ಆಟಗಾರರ ಪಟ್ಟಿ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ಟಿ20: ಇಂದೇ ಸರಣಿ ಗೆಲ್ಲುವ ತವಕದಲ್ಲಿ ಟೀಂ ಇಂಡಿಯಾ