ಗುವಾಹಟಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯ ಇಂದು ಗುವಾಹಟಿ ಮೈದಾನದಲ್ಲಿ ನಡೆಯಲಿದೆ.
ಕಳೆದ ಎರಡೂ ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಹೊಂದಿದೆ. ಒಟ್ಟು ಐದು ಪಂದ್ಯಗಳ ಸರಣಿ ಇದಾಗಿದ್ದು ಇಂದಿನ ಪಂದ್ಯವನ್ನೂ ಗೆದ್ದು ವಿಶ್ವಕಪ್ ಸೋಲಿಗೆ ಮುಲಾಮು ಹಚ್ಚುವ ತವಕದಲ್ಲಿ ಟೀಂ ಇಂಡಿಯಾವಿದೆ.
ಕಳೆದ ಎರಡೂ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಪಡೆ ಬ್ಯಾಟಿಂಗ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ವಿಶೇಷವಾಗಿ ಅಗ್ರಕ್ರಮಾಂಕ ಸಿಡಿಯುತ್ತಿರುವುದು ಭಾರತಕ್ಕೆ ಪ್ಲಸ್ ಪಾಯಿಂಟ್. ಮೊದಲ ಪಂದ್ಯದಲ್ಲಿ ಬೌಲಿಂಗ್ ಕೊಂಚ ಕಳೆಗುಂದಿದ್ದರೂ ಎರಡನೇ ಪಂದ್ಯದಲ್ಲಿ ಟ್ರ್ಯಾಕ್ ಗೆ ಬರುವ ಲಕ್ಷಣ ತೋರಿದೆ.
ಅತ್ತ ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಗೆದ್ದ ಬಳಿಕ ಟಿ20 ಕ್ರಿಕೆಟ್ ಸರಣಿಯನ್ನು ಅಷ್ಟಾಗಿ ಗಂಭೀರವಾಗಿ ತೆಗೆದುಕೊಂಡ ಹಾಗಿಲ್ಲ. ಗ್ಲೆನ್ ಮ್ಯಾಕ್ಸ್ ವೆಲ್ ನಂತಹ ಘಟಾನುಘಟಿಗಳೇ ತಂಡಕ್ಕೆ ಬಂದರೂ ಆಸೀಸ್ ಗೆ ಕಳೆದ ಎರಡೂ ಪಂದ್ಯಗಳಲ್ಲಿ ಅದೃಷ್ಟ ಕೈ ಹಿಡಿದಿಲ್ಲ. ಇಂದು ಗೆದ್ದ ಸರಣಿ ಉಳಿಸಿಕೊಳ್ಳಲು ಪ್ರಯತ್ನ ನಡೆಸಲಿದೆ. ಈ ಪಂದ್ಯ ಸಂಜೆ 7 ಗಂಟೆಗೆ ನಡೆಯಲಿದೆ.