Publish Date: Mon, 27 Nov 2023 (10:40 IST)
Updated Date: Mon, 27 Nov 2023 (10:47 IST)
ತಿರುವನಂತಪುರಂ: ಟೀಂ ಇಂಡಿಯಾ ಯುವ ಸೆನ್ಸೇಷನಲ್ ಬ್ಯಾಟಿಗ ಯಶಸ್ವಿ ಜೈಸ್ವಾಲ್ ಈಗ ಅನೇಕ ಅಭಿಮಾನಿಗಳನ್ನು ಸಂಪಾದಿಸುತ್ತಿದ್ದಾರೆ.
ಹೊಡೆಬಡಿಯ ಆಟದ ಮೂಲಕ ಆಸ್ಟ್ರೇಲಿಯಾ ವಿರುದ್ಧ ಆಡಿರುವ ಎರಡೂ ಟಿ20 ಪಂದ್ಯಗಳಲ್ಲಿ ಜೈಸ್ವಾಲ್ ಕಮಾಲ್ ಮಾಡಿದ್ದಾರೆ. ನಿನ್ನೆ ನಡೆದ ಟಿ20 ಪಂದ್ಯದಲ್ಲಂತೂ ಅವರ ಹೊಡೆಬಡಿಯ ಆಟದಿಂದಾಗಿ ಭಾರತ 5 ಓವರ್ ಗಳಲ್ಲೇ 60 ರನ್ ದಾಟಿತ್ತು.
ಇನ್ನೂ ಹಾಲುಗಲ್ಲದ ಹುಡುಗನಂತಿರುವ ಜೈಸ್ವಾಲ್ ಗೆ ಯುವಕರು, ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು. ಅವರು ಹೋದಲೆಲ್ಲಾ ಈಗ ಆಟೋಗ್ರಾಫ್ ಗಾಗಿ ಮುಗಿಬೀಳುತ್ತಿದ್ದಾರೆ.
ನಿನ್ನೆಯ ಪಂದ್ಯದ ಬಳಿಕವೂ ಜೈಸ್ವಾಲ್ ಬಳಿ ಆಟೋಗ್ರಾಫ್ ಹಾಕಿಸಿಕೊಳ್ಳಲು ಮಕ್ಕಳ ಸೈನ್ಯವೊಂದು ಕಾಯುತ್ತಿತ್ತು. ಈ ವೇಳೆ ಬಾಲಕನೊಬ್ಬ ಆಟೋಗ್ರಾಫ್ ಪಡೆದಿದ್ದಲ್ಲದೆ, ಶೇಕ್ ಹ್ಯಾಂಡ್ ಮಾಡಿದ್ದಾನೆ. ಅಷ್ಟೇ ಅಲ್ಲ, ಜೈಸ್ವಾಲ್ ಶೇಕ್ ಹ್ಯಾಂಡ್ ಮಾಡಿ ಅತ್ತ ತಿರುಗುವಷ್ಟರಲ್ಲಿ ಕೆನ್ನೆ ಹಿಂಡಿ ಮುತ್ತು ಕೊಟ್ಟಿದ್ದಾನೆ. ಅಭಿಮಾನಿಯ ಈ ಅನಿರೀಕ್ಷಿತ ವರ್ತನೆಯಿಂದ ಜೈಸ್ವಾಲ್ ನಾಚಿಕೊಂಡಿದ್ದಾರೆ.