Publish Date: Mon, 27 Nov 2023 (11:20 IST)
Updated Date: Mon, 27 Nov 2023 (11:24 IST)
Photo Courtesy: Instagram
ಮುಂಬೈ: ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬಳಿಕ ಸೋಷಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದ ವಿರಾಟ್ ಕೊಹ್ಲಿ ಈಗ ಮತ್ತೆ ಫೋಟೋವೊಂದನ್ನು ಪ್ರಕಟಿಸಿದ್ದಾರೆ.
ಆದರೆ ಅವರ ಫೋಟೋ ಅಭಿಮಾನಿಗಳಿಗೆ ಆತಂಕ ತಂದಿದೆ. ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಕಿಂಗ್ ಕೊಹ್ಲಿ ತಮ್ಮದೇ ಫೋಟೋವೊಂದನ್ನು ಪ್ರಕಟಿಸಿದ್ದಾರೆ. ಆ ಫೋಟೋದಲ್ಲಿ ಕೊಹ್ಲಿಯ ಮೂಗಿಗೆ ಚಿಕ್ಕ ಬ್ಯಾಂಡೇಜ್ ಹಾಕಲಾಗಿದೆ. ಮುಖದ ಇತರೇ ಭಾಗದಲ್ಲಿ ತರಚಿದ ಗಾಯಗಳಿವೆ.
ಇದನ್ನು ನೋಡಿದರೆ ವಿರಾಟ್ ಕೊಹ್ಲಿಗೆ ಏನೋ ಆಗಿರಬೇಕು ಎಂದು ಅಭಿಮಾನಿಗಳಿಗೆ ಆತಂಕವಾಗುವುದು ಸಹಜ. ಆದರೆ ಕೊಹ್ಲಿ ಈ ಫೋಟೋದಲ್ಲಿ ನಗುತ್ತಿದ್ದು, ಇನ್ನೊಬ್ಬ ಹುಡುಗನನ್ನು ನೋಡಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಇನ್ನೊಂದು ರೀಲ್ಸ್ ಪ್ರಕಟಿಸಿದ್ದು, ಅಲ್ಲಿ ಪ್ಯೂಮಾ ಇಂಡಿಯಾ ಜಾಹೀರಾತು ಹಾಕಿಕೊಂಡಿದ್ದಾರೆ.
ಹೀಗಾಗಿ ಇದು ಜಾಹೀರಾತು ನಿಮಿತ್ತ ಮಾಡಿರುವ ಅವತಾರವೋ ಎಂಬುದು ಸ್ಪಷ್ಟವಾಗಿದೆ. ಅರೆಕ್ಷಣ ಕೊಹ್ಲಿ ಫೋಟೋ ನೋಡಿ ಗಾಬರಿಯಾದವರು ಈಗ ನಿರಾಳವಾಗಬಹುದು.