Publish Date: Fri, 24 Nov 2023 (20:19 IST)
Updated Date: Fri, 24 Nov 2023 (20:21 IST)
ಮುಂಬೈ: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾವಣೆ ಬಗ್ಗೆ ಈಗ ಭಾರೀ ಊಹಾಪೋಹಗಳು ಕೇಳಿಬರುತ್ತಿವೆ.
ಹಾರ್ದಿಕ್ ಪಾಂಡ್ಯರನ್ನು ಗುಜರಾತ್ ಟೈಟನ್ಸ್ ರಿಲೀಸ್ ಮಾಡಲಿದೆ. ಅವರು ಮತ್ತೆ ತಮ್ಮ ಹಳೆಯ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಕೂಡಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ. ಹೀಗಾದಲ್ಲಿ ಅವರನ್ನೇ ಮುಂಬೈ ನಾಯಕರಾಗಿ ಮಾಡಲಿದೆ. ರೋಹಿತ್ ಶರ್ಮಾರನ್ನು ಮುಂಬೈ ರಿಲೀಸ್ ಮಾಡಲಿದೆ ಎಂಬ ಸುದ್ದಿಯಿದೆ.
ರೋಹಿತ್ ಶರ್ಮಾ ಈ ಮೊದಲು ಗುಜರಾತ್ ಟೈಟನ್ಸ್ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೀಗ ರೋಹಿತ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಗಾಳಿ ಸುದ್ದಿಯೂ ಬಲವಾಗಿ ಕೇಳಿಬರುತ್ತಿದೆ.
ಒಂದು ವೇಳೆ ರೋಹಿತ್ ಬೆಂಗಳೂರು ತಂಡಕ್ಕೆ ಬಂದರೆ ಕೊಹ್ಲಿ-ರೋಹಿತ್ ಜೋಡಿ ಜೊತೆಯಾಗಿ ಆರ್ ಸಿಬಿಗೆ ಮೊದಲ ಬಾರಿಗೆ ಕಪ್ ಗೆದ್ದುಕೊಡಬಹುದು ಎಂದು ನೆಟ್ಟಿಗರು ಭರವಸೆ ವ್ಯಕ್ತಪಡಿಸುತ್ತಿದ್ದಾರೆ. ರೋಹಿತ್ ಆರ್ ಸಿಬಿ ಸೇರುವ ಸಾಧ‍್ಯತೆ ಕಡಿಮೆ. ಆದರೆ ಫ್ಯಾನ್ಸ್ ಮಾತ್ರ ಹೀಗೊಂದು ಸಾಧ‍್ಯತೆ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.