ಮುಂಬೈ: ಐಪಿಎಲ್ 2024 ಕ್ಕೆ ಈಗಲೇ ತಯಾರಿ ಶುರುವಾಗಿದೆ. ಎಲ್ಲಾ ಫ್ರಾಂಚೈಸಿಗಳು ಆಟಗಾರರ ಖರೀದಿ, ಕೋಚ್ ಗಳ ನೇಮಕ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿವೆ.
ಇದೀಗ ಕೇಳಿಬರುತ್ತಿರುವ ಲೇಟೆಸ್ಟ್ ಸುದ್ದಿ ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾರದ್ದು. ಕಳೆದ ಎರಡು ಆವೃತ್ತಿಗಳಿಂದ ಗುಜರಾತ್ ಟೈಟನ್ಸ್ ನಾಯಕರಾಗಿ ಒಮ್ಮೆ ಚಾಂಪಿಯನ್ ಆಗಿದ್ದ ಹಾರ್ದಿಕ್ ಪಾಂಡ್ಯ ಈಗ ಗುಜರಾತ್ ತಂಡವನ್ನು ತೊರೆಯುವ ಸುದ್ದಿ ಕೇಳಿಬರುತ್ತಿದೆ.
ಇದಕ್ಕೆ ಮೊದಲು ಹಾರ್ದಿಕ್ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಆಗ ಹಾರ್ದಿಕ್ ಗೆ ಸಾಕಷ್ಟು ಯಶಸ್ಸು ಸಿಕ್ಕಿತ್ತು. ಗುಜರಾತ್ ಟೈಟನ್ಸ್ ಎಂಬ ಹೊಸ ತಂಡವಾಗುತ್ತಿದ್ದಂತೇ ಹಾರ್ದಿಕ್ ಆ ತಂಡದ ನಾಯಕರಾಗಿ ಆಯ್ಕೆಯಾದರು. ಆದರೆ ಇದೀಗ ಹಾರ್ದಿಕ್ ಗೆ ಮತ್ತೆ ಮುಂಬೈಗೆ ಮರಳಿದರೆ ಅವರ ಬದಲಿಯಾಗಿ ರೋಹಿತ್ ಶರ್ಮಾರನ್ನು ಮುಂಬೈ ಫ್ರಾಂಚೈಸಿ ಗುಜರಾತ್ ಗೆ ಬಿಟ್ಟುಕೊಡಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಆದರೆ ಇದು ಎಷ್ಟು ನಿಜವೋ ಗೊತ್ತಿಲ್ಲ. ಎಲ್ಲಾ ಫ್ರಾಂಚೈಸಿಗಳಿಗೂ ತಮ್ಮ ಆಟಗಾರರನ್ನು ಬದಲಾಯಿಸಲು ನವಂಬರ್ 26 ರವರೆಗೆ ಸಮಯಾವಕಾಶವಿದೆ. ಹೀಗಾಗಿ ಅದಕ್ಕೆ ಮೊದಲು ಎಲ್ಲವೂ ಖಚಿತವಾಗಲಿದೆ.