Select Your Language

Notifications

webdunia
webdunia
webdunia
webdunia

ವಿಶ್ವಕಪ್ ಫೈನಲ್ ಬಳಿಕ ತವರಿಗೆ ಮರಳಿದ ರೋಹಿತ್ ಶರ್ಮಾ

ವಿಶ್ವಕಪ್ ಫೈನಲ್ ಬಳಿಕ ತವರಿಗೆ ಮರಳಿದ ರೋಹಿತ್ ಶರ್ಮಾ
ಮುಂಬೈ , ಮಂಗಳವಾರ, 21 ನವೆಂಬರ್ 2023 (11:22 IST)
ಮುಂಬೈ: ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಆಘಾತಕಾರಿ ಸೋಲಿನ ಬಳಿಕ ನಾಯಕ ರೋಹಿತ್ ಶರ್ಮಾ ತವರು ಮುಂಬೈಗೆ ಬಂದಿಳಿದಿದ್ದಾರೆ.

ಪತ್ನಿ ರಿತಿಕಾ ಮತ್ತು ಪುತ್ರಿ ಸಮೈರಾ ಜೊತೆ ರೋಹಿತ್ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅಹಮ್ಮದಾಬಾದ್ ನಲ್ಲಿ ಫೈನಲ್ ಪಂದ್ಯ ನಡೆದಿತ್ತು.

ಫೈನಲ್ ಸೋಲಿನ ಬಳಿಕ ದುಃಖ ತಡೆಯಲಾಗದೇ ರೋಹಿತ್ ಕಣ್ಣೀರು ಸುರಿಸಿದ್ದರು. ಬಳಿಕ ಏಕಾಂಗಿಯಾಗಿ ಪೆವಿಲಿಯನ್ ನತ್ತ ತೆರಳಿದ್ದರು. ಅವರ ಈ ವಿಡಿಯೋ ಎಷ್ಟೋ ಜನರ ಹೃದಯ ಕಲಕಿತ್ತು. ಇನ್ನು ಭಾರತೀಯ ಡ್ರೆಸ್ಸಿಂಗ್ ರೂಂಗೆ ತೆರಳಿದ್ದ ಪ್ರಧಾನಿ ಮೋದಿ ರೋಹಿತ್, ಕೊಹ್ಲಿ ಕೈ ಹಿಡಿದು ಸಾಂತ್ವನಿಸಿದ್ದರು. ಅಲ್ಲದೆ, ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಭರವಸೆ ನೀಡಿದ್ದರು.

ವಿಶ್ವಕಪ್ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ-ಆಸ್ಟ್ರೇಲಿಯಾ ನಡುವೆ ಟಿ20 ಸರಣಿ ನಡೆಯಲಿದೆ. ಆದರೆ ಈ ಸರಣಿಗೆ ರೋಹಿತ್ ಸೇರಿದಂತೆ ಪ್ರಮುಖರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ವಿಶ್ವಕಪ್ ಸೋಲಿನ ದುಃಖ ಮರೆಯಲು ಕೆಲವು ದಿನ ಈ ಕ್ರಿಕೆಟಿಗರು ಕುಟುಂಬದ ಜೊತೆ ಕಾಲ ಕಳೆಯಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್ ಫೈನಲ್ ವೀಕ್ಷಿಸಲು ಧೋನಿ ಯಾಕೆ ಬರಲಿಲ್ಲ? ಇಲ್ಲಿದೆ ಕಾರಣ