Publish Date: Tue, 21 Nov 2023 (10:30 IST)
Updated Date: Tue, 21 Nov 2023 (10:42 IST)
ರಾಂಚಿ: ಅಹಮ್ಮದಾಬಾದ್ ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಐಸಿಸಿ ಮಾಜಿ ನಾಯಕರಿಗೆ ಆಹ್ವಾನ ನೀಡಿತ್ತು. ಅವರಲ್ಲಿ ಧೋನಿ ಕೂಡಾ ಸೇರಿದ್ದರು.
ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯ ವೀಕ್ಷಿಸಲು ಧೋನಿ ಮೈದಾನಕ್ಕೆ ಬರಬಹುದು ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆದರೆ ಧೋನಿ ಮೈದಾನಕ್ಕೆ ಬರಲೇ ಇಲ್ಲ.
ಇದಕ್ಕೆ ಕಾರಣ ಧೋನಿ ಪತ್ನಿ ಸಾಕ್ಷಿ ಬರ್ತ್ ಡೇ. ನವಂಬರ್ 19 ರಂದು ಸಾಕ್ಷಿ ಹುಟ್ಟುಹಬ್ಬವಿತ್ತು. ಈ ಕಾರಣಕ್ಕೆ ಧೋನಿ ಪತ್ನಿ, ಕುಟುಂಬದವರ ಸಮೇತ ಉತ್ತರಾಖಂಡ ಪ್ರವಾಸದಲ್ಲಿದ್ದರು. ಇಲ್ಲಿ ಹೋಮ-ಹವನದಲ್ಲಿ ಭಾಗಿಯಾಗಿದ್ದರು.
ಈ ಕಾರಣಕ್ಕೆ ಅವರು ಫೈನಲ್ ವೀಕ್ಷಿಸಲು ಮೈದಾನಕ್ಕೆ ಬರಲಿಲ್ಲ. ಆದರೆ ಇದರ ನಡುವೆಯೂ ನೇರಪ್ರಸಾರ ವೀಕ್ಷಿಸುತ್ತಿದ್ದರು. ಆದರೆ ಭಾರತ ತಂಡದ ಪೇಲವ ಬ್ಯಾಟಿಂಗ್ ಪ್ರದರ್ಶನದಿಂದ ಬೇಸರಗೊಂಡ ಧೋನಿ ಅರ್ಧಕ್ಕೇ ಪಂದ್ಯ ವೀಕ್ಷಣೆ ನಿಲ್ಲಿಸಿದರು ಎನ್ನಲಾಗಿದೆ.