Select Your Language

Notifications

webdunia
webdunia
webdunia
webdunia

ವಿಶ್ವಕಪ್ ಫೈನಲ್ ಸೋಲಿನಲ್ಲೂ ಧೋನಿ ನೆನೆಸಿಕೊಂಡ ಭಾರತೀಯ ಫ್ಯಾನ್ಸ್

ವಿಶ್ವಕಪ್ ಫೈನಲ್ ಸೋಲಿನಲ್ಲೂ ಧೋನಿ ನೆನೆಸಿಕೊಂಡ ಭಾರತೀಯ ಫ್ಯಾನ್ಸ್
ಅಹಮ್ಮದಾಬಾದ್ , ಸೋಮವಾರ, 20 ನವೆಂಬರ್ 2023 (11:06 IST)
Photo Courtesy: Twitter
ಅಹಮ್ಮದಾಬಾದ್: ವಿಶ್ವಕಪ್ ಗೆಲ್ಲುವುದು ಒಂದು ಕಲೆ. ಅದು ಎಲ್ಲರಿಗೂ ಕರಗತವಾಗಲ್ಲ. ಆದರೆ ಧೋನಿ ಅದನ್ನು ಸುಲಭ ಮಾಡಿದ್ದರು ಅಷ್ಟೇ! ವಿಶ್ವಕಪ್ ಫೈನಲ್ ಸೋಲಿನ ಬಳಿಕ ಫ್ಯಾನ್ಸ್ ತಮ್ಮ ಮೆಚ್ಚಿನ ನಾಯಕ ಧೋನಿಯನ್ನು ನೆನೆಸಿಕೊಂಡಿದ್ದು ಹೀಗೆ.

ಧೋನಿ 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದುಕೊಂಡಾಗ ಅವರ ನಾಯಕತ್ವವನ್ನು ಎಲ್ಲರೂ ಕೊಂಡಾಡಿದ್ದರು. ಆದರೆ ಅವರ ಸಿಕ್ಸರ್ ನಿಂದಲೇ ಫೈನಲ್ ಗೆದ್ದಿಲ್ಲ ಎಂದು ಕೆಲವರು ಮೂಗು ಮುರಿದವರಿದ್ದರು.

ಅದೇನೇ ಇದ್ದರೂ ಐಸಿಸಿ ಟೂರ್ನಿಗಳಲ್ಲಿ ಬೆಸ್ಟ್ ನಾಯಕ ಎಂದರೆ ಧೋನಿ ಎಂದು ಇದೀಗ ವಿಶ್ವಕಪ್ ಸೋಲಿನ ಬಳಿಕ ಫ್ಯಾನ್ಸ್ ಹೇಳುತ್ತಿದ್ದಾರೆ. ಈ ಬಾರಿ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಫೈನಲ್ ತನಕ ಎಲ್ಲಾ ವಿಭಾಗಗಳಲ್ಲಿ ಯೋಜನಾಬದ್ಧವಾಗಿ ಆಡಿತ್ತು. ಆದರೆ ಫೈನಲ್ ನಲ್ಲಿ ಎಲ್ಲಾ ಲೆಕ್ಕಾಚಾರಗಳೂ ಉಲ್ಟಾ ಆಯಿತು.

ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರೂ ವಿಭಾಗಗಳೂ ಕೈಕೊಟ್ಟಿತು. ಇದರಿಂದಾಗಿ ಭಾರತಕ್ಕೆ ಸೋಲಾಯಿತು. ಇದರೊಂದಿಗೆ ಇಷ್ಟು ದಿನ ಗಳಿಸಿದ್ದ ಅಭಿಮಾನವೆಲ್ಲಾ ನೀರುಪಾಲಾಯಿತು. ಹೀಗಾಗಿ ಫ್ಯಾನ್ಸ್ ಈ ಸಂದರ್ಭದಲ್ಲಿ ಧೋನಿ ಇರಬೇಕಿತ್ತು, ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಬೇಸರಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಫೈನಲ್: ಭಾರತದ ಸೋಲಿಗೆ ಅಂಪಾಯರ್ ಕೆಟಲ್ ಬರೊ ವಿರುದ್ಧ ಆಕ್ರೋಶ