ಅಹಮ್ಮದಾಬಾದ್: ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮುನ್ನ ಅಹಮ್ಮದಾಬಾದ್ ಮೈದಾನದಲ್ಲಿ ವಿರಾಟ್ ಕೊಹ್ಲಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.
ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ 50 ನೇ ಶತಕ ಗಳಿಸಿ ಸಚಿನ್ ತೆಂಡುಲ್ಕರ್ ದಾಖಲೆ ಮುರಿದಿದ್ದರು. ಈ ವೇಳೆ ಸಚಿನ್ ಗೆ ವಿರಾಟ್ ಮೈದಾನದಲ್ಲೇ ವಂದಿಸಿ ಗೌರವ ನೀಡಿದ್ದರು.
ಇದೀಗ ಫೈನಲ್ ಪಂದ್ಯಕ್ಕೆ ಮುನ್ನ ವಿರಾಟ್ ಗೆ ಸಚಿನ್ ತಾವು ಕೊನೆಯ ಏಕದಿನ ಪಂದ್ಯದಲ್ಲಿ ಧರಿಸಿದ್ದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಉಡುಗೊರೆ ಪಡೆದ ಕೊಹ್ಲಿ ಸಂತೋಷದಿಂದಲೇ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಕೊಹ್ಲಿ ಸದಾ ಸಚಿನ್ ತಮ್ಮ ಆರಾಧ್ಯ ದೈವ ಎನ್ನುತ್ತಾರೆ. ಇದೀಗ ಅದೇ ಸಚಿನ್ ರಿಂದ ವಿಶೇಷ ಉಡುಗೊರೆ ಪಡೆದಿರುವುದು ವಿಶೇಷ.