ಅಹಮ್ಮದಾಬಾದ್; ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕ್ಯುಮಿನ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
ಪಿಚ್ ವರದಿ ಪ್ರಕಾರ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ತಂಡಕ್ಕೆ ಅನುಕೂಲ ಹೆಚ್ಚು ಎಂದು ವರದಿಯಾಗಿತ್ತು. ಅದರಂತೆ ಟಾಸ್ ವಿನ್ ಆದ ಆಸೀಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
ಈ ಮಹತ್ವದ ಫೈನಲ್ ಪಂದ್ಯದಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳೂ ಸೆಮಿಫೈನಲ್ ನಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸಿದೆ. ಎರಡನೇ ಸರದಿಯಲ್ಲಿ ಡ್ಯೂ ಫ್ಯಾಕ್ಟರ್ ಪರಿಣಾಮ ಬೀರುವ ಸಾಧ‍್ಯತೆಯಿದೆ. ಇಂದಿನ ಬಹುನಿರೀಕ್ಷಿತ ಪಂದ್ಯಕ್ಕ ಸ್ಟೇಡಿಯಂ ಭರ್ತಿಯಾಗಿದ್ದು ಸಾಕಷ್ಟು ಸಂಖ್ಯೆಯಲ್ಲಿ ವಿಐಪಿ ಪ್ರೇಕ್ಷಕರೂ ನೆರೆದಿದ್ದಾರೆ.