Publish Date: Sun, 19 Nov 2023 (09:40 IST)
Updated Date: Sun, 19 Nov 2023 (09:50 IST)
ಅಹಮ್ಮದಾಬಾದ್: ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ನಲ್ಲಿ ಟೀಂ ಇಂಡಿಯಾ ಗೆದ್ದರೆ ಉಚಿತ ಬಿಯರ್ ನೀಡುವುದಾಗಿ ಪಬ್ ಒಂದು ಘೋಷಣೆ ಮಾಡಿದೆ.
ಇಂದು ಅಹಮ್ಮದಾಬಾದ್ ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಫೈನಲ್ ನಡೆಯಲಿದೆ. ಈ ಪಂದ್ಯಕ್ಕಾಗಿ ಇಡೀ ವಿಶ್ವವೇ ಎದಿರು ನೋಡುತ್ತಿದೆ. ಅತಿಥೇಯ ಭಾರತ ಗೆಲ್ಲುವ ಫೇವರಿಟ್ ಆಗಿದೆ.
ನಿನ್ನೆಯಿಂದಲೇ ಹಲವೆಡೆ ಭಾರತ ಗೆಲ್ಲಲಿ ಎಂದು ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ಇದೀಗ ಮೈಸೂರಿನ ಪೆಗ್ಸ್ ಆಂಡ್ ಕೆಗ್ಸ್ ಪಬ್ ಆಂಡ್ ರೆಸ್ಟೋರೆಂಟ್ ಭಾರತ ಗೆದ್ದರೆ ಉಚಿತ ಬಿಯರ್ ನೀಡುವುದಾಗಿ ಘೋಷಣೆ ಮಾಡಿದೆ. ಇದು ಎಣ್ಣೆ ಪ್ರಿಯರನ್ನು ಸೆಳೆಯಲಿದೆ.