Publish Date: Sat, 18 Nov 2023 (17:40 IST)
Updated Date: Sat, 18 Nov 2023 (17:42 IST)
ಅಹಮ್ಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಲಿದೆ. ನಾಳೆ ಮಧ್ಯಾಹ್ನ ಫೈನಲ್ ಪಂದ್ಯ ನಡೆಯಲಿದೆ.
ಇದಕ್ಕೆ ಮೊದಲು ಇಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕ್ಯುಮಿನ್ಸ್ ವಿಶ್ವಕಪ್ ಟ್ರೋಫಿಯೊಂದಿಗೆ ಫೋಟೋ ಸೆಷನ್ ನಡೆಸಿದ್ದಾರೆ.
ಇಬ್ಬರ ಫೋಟೋಗಳನ್ನು ಹಂಚಿಕೊಂಡಿರುವ ಬಿಸಿಸಿಐ ಬಹುನಿರೀಕ್ಷಿತ ಫೈನಲ್ ಗೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಎಂದು ಬರೆದುಕೊಂಡಿದೆ.
ನಾಳೆ ಅಪರಾಹ್ನ 2 ಗಂಟೆಯಿಂದ ಫೈನಲ್ ಪಂದ್ಯ ಆರಂಭವಾಗಲಿದೆ. ಇದರ ಜೊತೆಗೆ ಹಲವು ಮನರಂಜನಾ ಕಾರ್ಯಕ್ರಮಗಳನ್ನೂ ಬಿಸಿಸಿಐ ಹಮ್ಮಿಕೊಂಡಿದೆ. ಭಾರತಕ್ಕೆ ಇದು ನಾಲ್ಕನೆಯ ವಿಶ್ವಕಪ್ ಫೈನಲ್ ಆದರೆ ಆಸ್ಟ್ರೇಲಿಯಾಗೆ ಇದು ಎಂಟನೇ ವಿಶ್ವಕಪ್ ಫೈನಲ್ ಪಂದ್ಯವಾಗಿದೆ.