ಅಹಮ್ಮದಾಬಾದ್: ಈ ಬಾರಿಯ ವಿಶ್ವಕಪ್ ಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಆಟಗಾರರಿಗೆ ನೀಡಲಾಗುವ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಅವಾರ್ಡ್ ಗೆ ಐಸಿಸಿ 9 ಆಟಗಾರರ ಹೆಸರುಗಳನ್ನು ನಾಮ ನಿರ್ದೇಶನ ಮಾಡಿದೆ.
									
			
			 
 			
 
 			
					
			        							
								
																	ಆ ಪೈಕಿ ನಾಲ್ವರು ಆಟಗಾರರು ಭಾರತೀಯರೇ ಆಗಿರುವುದು ವಿಶೇಷ. ಈ ಮೂಲಕ ಐಸಿಸಿ ಅವಾರ್ಡ್ ಲಿಸ್ಟ್ ನಲ್ಲಿ ಭಾರತೀಯ ಆಟಗಾರರಿಗೆ ಬಹುಪಾಲು ಸಿಕ್ಕಿದೆ.
									
										
								
																	ಈ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೆ ಆಡಿದ ಎಲ್ಲಾ 10 ಪಂದ್ಯಗಳನ್ನೂ ಗೆದ್ದು ಅಜೇಯವಾಗಿರುವ ಟೀಂ ಇಂಡಿಯಾ, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಅದ್ಭುತ ಪ್ರದರ್ಶನ ನೀಡಿದೆ.
									
											
							                     
							
							
			        							
								
																	ಐಸಿಸಿ ನಾಮನಿರ್ದೇಶನ ಮಾಡಿರುವ ಆಟಗಾರರಲ್ಲಿ ಭಾರತೀಯ ಆಟಗಾರರಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದ್ದಾರೆ. ಇತರೆ ದೇಶದ ಆಟಗಾರರ ಪೈಕಿ ಆಸ್ಟ್ರೇಲಿಯಾದ ಇಬ್ಬರು, ನ್ಯೂಜಿಲೆಂಡ್ ನ ಇಬ್ಬರು ಮತ್ತು ದ.ಆಫ್ರಿಕಾದ ಓರ್ವ ಆಟಗಾರನೂ ಸೇರಿದ್ದಾರೆ. ಫೈನಲ್ ಪಂದ್ಯದ ಬಳಿಕ ವಿಜೇತರ ಘೋಷಣೆಯಾಗಲಿದೆ.