Publish Date: Sat, 18 Nov 2023 (09:20 IST)
Updated Date: Sat, 18 Nov 2023 (09:27 IST)
ಅಹಮ್ಮದಾಬಾದ್: ಈ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಎಲ್ಲಾ ಆಟಗಾರರೂ ತಂಡದ ಗೆಲುವಿಗೆ ಸಮಾನವಾಗಿ ಪರಿಶ್ರಮಪಟ್ಟಿದ್ದಾರೆ. ಗೆಲುವಿಗೆ ಎಲ್ಲರ ಕೊಡುಗೆಯೂ ಇದೆ.
ಆದರೆ ನಾಯಕ ರೋಹಿತ್ ಶರ್ಮಾಗೆ ಫೀಲ್ಡಿಂಗ್ ಮಾಡುವಾಗ ಎಲ್ಲರಿಗಿಂತ ಹೆಚ್ಚು ವಿಶ್ವಾಸ ಯಾರ ಮೇಲೆ ಗೊತ್ತಾ? ಅವರು ಬೇರೆ ಯಾರೂ ಅಲ್ಲ ಉಪನಾಯಕ, ವಿಕೆಟ್ ಕೀಪರ್ ಕೆಎಲ್ ರಾಹುಲ್ ಮೇಲೆ.
ರಾಹುಲ್ ವಿಕೆಟ್ ಹಿಂದುಗಡೆ ಇದ್ದು ರೋಹಿತ್ ಗೆ ಫೀಲ್ಡಿಂಗ್ ಸೆಟ್ ಮಾಡುವಲ್ಲಿ, ಬೌಲಿಂಗ್ ಬದಲಾವಣೆಯಲ್ಲಿ ತಕ್ಕ ಸಲಹೆ ನೀಡುತ್ತಾರೆ. ಅಷ್ಟೇ ಅಲ್ಲ, ಖುದ್ದಾಗಿ ತಾವೇ ಫೀಲ್ಡರ್ ಗಳನ್ನು ಬದಲಾಯಿಸುತ್ತಾರೆ. ಇದಕ್ಕೆ ರೋಹಿತ್ ನೀಡಿರುವ ಸ್ವಾತಂತ್ರ್ಯವೇ ಕಾರಣವಂತೆ. ಇನ್ನು, ಡಿಆರ್ ಎಸ್ ತೆಗೆದುಕೊಳ್ಳುವ ವಿಚಾರದಲ್ಲಂತೂ ರೋಹಿತ್ ನನಗೆ ನಿನ್ನ ಬಿಟ್ಟು ಬೇರೆ ಯಾರ ಮೇಲೂ ನಂಬಿಕೆಯಿಲ್ಲ ಎಂದಿದ್ದಾರಂತೆ. ರಾಹುಲ್ ತೆಗೆದುಕೊಳ್ಳುವ ನಿರ್ಧಾರಗಳು ಅಷ್ಟು ಕರಾರುವಾಕ್ ಆಗಿರುತ್ತದೆ. ಇದು ರೋಹಿತ್ ಗೆ ರಾಹುಲ್ ಮೇಲಿರುವ ನಂಬಿಕೆಗೆ ಸಾಕ್ಷಿ.