Publish Date: Wed, 15 Nov 2023 (10:26 IST)
Updated Date: Wed, 15 Nov 2023 (10:28 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಇಂದು ನಡೆಯಲಿರುವ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಬೇಕು ಎಂಬುದು ತಜ್ಞರ ಅಭಿಪ್ರಾಯ.
ವಾಂಖೆಡೆ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡಕ್ಕೆ ಗೆಲ್ಲುವ ಅನುಕೂಲ ಹೆಚ್ಚು ಎಂಬುದು ತಜ್ಞರ ಅಭಿಮತ. ಆದರೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಯಾರು ಗೆದ್ದರೂ ನಮಗೆ ಚಿಂತೆಯಿಲ್ಲ ಎಂದಿದ್ದಾರೆ.
ನಾನು ಇಲ್ಲಿ ಸಾಕಷ್ಟು ಪಂದ್ಯವಾಡಿದ್ದೇನೆ. ಕೇವಲ 5-6 ಪಂದ್ಯಗಳಿಂದ ವಾಂಖೆಡೆ ಮೈದಾನ ಹೀಗೇ ಎಂದು ಹೇಳಲು ಸಾಧ್ಯವಿಲ್ಲ. ಟಾಸ್ ಗೆಲ್ಲುವುದು ಪ್ರಮುಖ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ಹಿಂದಿನ ಪಂದ್ಯದಲ್ಲಿ ಏನೇ ಆಗಿರಲಿ, ಅದು ಇಂದಿಗೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.