ಮುಂಬೈ: ಏಕದಿನ ವಿಶ್ವಕಪ್ ಪಂದ್ಯದ ವೇಳೆ ಕಾಲಿಗೆ ಗಾಯಮಾಡಿಕೊಂಡಿದ್ದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದಲೂ ಹೊರಗುಳಿಯಲಿದ್ದಾರೆ.
ಬಾಂಗ್ಲಾದೇಶದ ವಿರುದ್ಧ ಅಕ್ಟೋಬರ್ 19 ರಂದು ನಡೆದ ಪಂದ್ಯದ ವೇಳೆ ಬೌಲಿಂಗ್ ಮಾಡುವಾಗ ಹಾರ್ದಿಕ್ ಜಾರಿ ಬಿದ್ದು ಕಾಲಿಗೆ ಏಟು ಮಾಡಿಕೊಂಡಿದ್ದರು. ಪರಿಣಾಮ ಅವರು ವಿಶ್ವಕಪ್ ನಿಂದ ಹೊರಬಿದ್ದಿದ್ದರು.
ಆದರೆ ಮುಂಬರುವ ಆಸೀಸ್ ವಿರುದ್ಧದ ಟಿ20 ಸರಣಿಗೆ ಅವರೇ ತಂಡದ ನಾಯಕರಾಗಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಹಾರ್ದಿಕ್ ಆ ಸರಣಿ ವೇಳೆಗೂ ಫಿಟ್ ಆಗದ ಕಾರಣ ಹೊರಗುಳಿಯಲಿದ್ದಾರೆ. ರೋಹಿತ್ ಶರ್ಮಾ ಸೇರಿದಂತೆ ಪ್ರಮುಖರು ಈ ಸರಣಿಗೆ ಗೈರಾಗಲಿದ್ದಾರೆ. ಹೀಗಾಗಿ ಈ ಸರಣಿಗೆ ಟೀಂ ಇಂಡಿಯಾ ನಾಯಕ ಯಾರಾಗಬಹುದು ಎಂಬ ಪ್ರಶ್ನೆಯೆದ್ದಿದೆ.