Publish Date: Sat, 18 Nov 2023 (08:20 IST)
Updated Date: Sat, 18 Nov 2023 (08:42 IST)
ಅಹಮ್ಮದಾಬಾದ್: ನಾಳೆ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ವೀಕ್ಷಿಸಲು ಗಣ್ಯಾತಿಗಣ್ಯರೇ ಅಹಮ್ಮದಾಬಾದ್ ಮೈದಾನಕ್ಕೆ ಬರಲಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಪ್ರಧಾನಿ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಆಲ್ಬನೀಸ್, ಸೂಪರ್ ಸ್ಟಾರ್ ರಜನೀಕಾಂತ್, ಮಾಜಿ ನಾಯಕ ಧೋನಿ, ಕಪಿಲ್ ದೇವ್, ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್ ಮೈದಾನದಲ್ಲಿ ಉಪಸ್ಥಿತಿರಲಿದ್ದಾರೆ.
ಅವರಲ್ಲದೇ ಸಿನಿಮಾ ಮಂದಿ ಕೂಡಾ ಮೈದಾನದಲ್ಲಿರಲಿದ್ದಾರೆ. ಮುಂಬೈನಲ್ಲಿ ನಡೆದಿದ್ದ ಸೆಮಿಫೈನಲ್ ಪಂದ್ಯಕ್ಕೆ ಬಾಲಿವುಡ್ ನ ಅನೇಕ ಸ್ಟಾರ್ ಗಳು ಮೈದಾನಕ್ಕೆ ಬಂದು ಪಂದ್ಯ ವೀಕ್ಷಿಸಿದ್ದರು.
ಇದೀಗ ಫೈನಲ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಚಿಯರ್ ಅಪ್ ಮಾಡಲು ಅನೇಕ ಬಾಲಿವುಡ್ ತಾರೆಯರು ಅಹಮ್ಮದಾಬಾದ್ ಗೆ ಬರಲಿದ್ದಾರೆ. ಒಟ್ಟಿನಲ್ಲಿ ನಾಳೆಯ ಫೈನಲ್ ಪಂದ್ಯಕ್ಕೆ ತಾರೆಯರ ದಂಡೇ ಹರಿದುಬರಲಿದೆ.