Select Your Language

Notifications

webdunia
webdunia
webdunia
webdunia

ರಜನಿಕಾಂತ್ ಟೀಂ ಇಂಡಿಯಾಗೆ ಲಕ್ಕಿ ಚಾರ್ಮ್!

ರಜನಿಕಾಂತ್ ಟೀಂ ಇಂಡಿಯಾಗೆ ಲಕ್ಕಿ ಚಾರ್ಮ್!
ಚೆನ್ನೈ , ಶನಿವಾರ, 18 ನವೆಂಬರ್ 2023 (08:10 IST)
Photo Courtesy: Twitter
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಬಗ್ಗೆ ಅನೇಕ ಮೆಮೆಗಳು, ಹೈಪ್ ಗಳು ನಾವು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ನೋಡುತ್ತಲೇ ಇರುತ್ತವೆ. ಆದರೆ ಟೀಂ ಇಂಡಿಯಾಗೆ ರಜನಿ ಎಂದರೆ ಲಕ್ಕಿ ಚಾರ್ಮ್ ಎಂದು ಇದೀಗ ಭಾರತೀಯ ಕ್ರಿಕೆಟ್ ಫ್ಯಾನ್ಸ್ ಹೇಳುತ್ತಿದ್ದಾರೆ!

ಇದಕ್ಕೆ ಕಾರಣವೂ ಇದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಮೈದಾನಕ್ಕೆ ರಜನಿ ಬಂದಿದ್ದು, ಪಂದ್ಯ ವೀಕ್ಷಿಸಿದ್ದಾರೆ. ತೀವ್ರ ರೋಚಕವಾಗಿದ್ದ ಈ ಪಂದ್ಯವನ್ನು ಟೀಂ ಇಂಡಿಯಾ ಗೆದ್ದು ಫೈನಲ್ ಗೇರಿದೆ.

ಇದಕ್ಕೆ ಮೊದಲು 2011 ರಲ್ಲಿ ಮುಂಬೈನ ವಾಂಖೆಡೆ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ವಿಶ್ವಕಪ್ ಫೈನಲ್ ಪಂದ್ಯವಾಡುವಾಗಲೂ ರಜನಿ ಮೈದಾನಕ್ಕೆ ಬಂದು ಪಂದ್ಯ ವೀಕ್ಷಿಸಿದ್ದರು. ಆಗಲೂ ಭಾರತ ಪಂದ್ಯ ಗೆದ್ದಿತ್ತು. ಹೀಗಾಗಿ ಈಗ ರಜನಿ ಫ್ಯಾನ್ಸ್ ರಜನಿ ಭಾರತ ತಂಡಕ್ಕೆ ಲಕ್ಕಿ ಚಾರ್ಮ್. ಅವರು ಬಂದರೆ ಪಂದ್ಯ ಗೆದ್ದೇ ಗೆಲ್ಲುತ್ತದೆ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದಾರೆ!

Share this Story:

Follow Webdunia kannada

ಮುಂದಿನ ಸುದ್ದಿ

ಸಪ್ತಸಾಗರದಾಚೆ ಎಲ್ಲೊ ಸೈಡ್ ಬಿ ನಾಳೆ ರಿಲೀಸ್