ಬೆಂಗಳೂರು: ಇಂದು ಭಾರತದ ಸೂಪರ್ ಸ್ಟಾರ್ ನಟನಾಗಿ ಜನರ ಮನದಲ್ಲಿ ಮನೆ ಮಾಡಿರುವ ರಜನೀಕಾಂತ್ ಹಿಂದೆ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು ಎಂಬುದು ಎಲ್ಲರಿಗೂ ಗೊತ್ತು.
ಸಮಯ ಸಿಕ್ಕಾಗಲೆಲ್ಲಾ ರಜನಿ ಬೆಂಗಳೂರಿಗೆ ಬಂದು ಇಲ್ಲಿನ ಗೆಳೆಯರೊಡನೆ ಜನ ಸಾಮಾನ್ಯನಂತೇ ಕಾಲ ಕಳೆಯುತ್ತಾರೆ. ಇದೀಗ ಜೈಲರ್ ಸಕ್ಸಸ್ ಬಳಿಕ ಉತ್ತರ ಭಾರತ ಪ್ರವಾಸ ಮುಗಿಸಿಕೊಂಡು ರಜನಿ ಬೆಂಗಳೂರಿನಲ್ಲಿ ಸುತ್ತಾಡುತ್ತಿದ್ದಾರೆ.
ತಾವು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಗ ಓಡಾಡಿದ್ದ ಜಾಗಕ್ಕೆ ಭೇಟಿ ಕೊಟ್ಟಿದ್ದಾರೆ. ಜಯನಗರದ ಬಿಎಂಟಿಸಿ ಬಸ್ ಡಿಪೋಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಜೊತೆ ಮಾತನಾಡಿ, ಅವರ ಜೊತೆ ಕಾಲ ಕಳೆದಿದ್ದಾರೆ ರಜನಿ. ಸೂಪರ್ ಸ್ಟಾರ್ ಆಗಿದ್ದರೂ ಅವರ ಈ ಸಿಂಪ್ಲಿಸಿಟಿಗೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.