Publish Date: Tue, 22 Aug 2023 (16:30 IST)
Updated Date: Tue, 22 Aug 2023 (16:31 IST)
ಹೈದರಾಬಾದ್: ನಟ ವಿಜಯ್ ದೇವರಕೊಂಡ ಸಂದರ್ಶನವೊಂದರಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಬಗ್ಗೆ ನೀಡಿದ ಹೇಳಿಕೆಯೊಂದು ಈಗ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದೆ.
ವಿಜಯ್ ಸಂದರ್ಶನವೊಂದರಲ್ಲಿ ಲೈಗರ್ ಫ್ಲಾಪ್ ಆದ ಬಳಿಕ ನಿಮಗೆ ಅವಕಾಶಗಳೇ ಸಿಗಲ್ಲ ಎಂದಿದ್ದರು ಎಂಬ ಪ್ರಶ್ನೆಗೆ ಉತ್ತರಿಸುವಾಗ ರಜನೀಕಾಂತ್, ಚಿರಂಜೀವಿ ಉದಾಹರಣೆ ನೀಡಿದ್ದರು.
ಸೂಪರ್ ಸ್ಟಾರ್ ಗಳು ಫ್ಲಾಪ್-ಹಿಟ್ ಸಿನಿಮಾಗಳನ್ನು ನೀಡುತ್ತಾರೆ. ರಜನೀಕಾಂತ್ ಸಾಲು ಸಾಲು ಫ್ಲಾಪ್ ನೀಡಿದರು. ಆದರೆ ಜೈಲರ್ ನಂತಹ ಸಿನಿಮಾ ಮಾಡಿದರೆ 500 ಕೋಟಿ ರೂ. ಕಲೆಕ್ಷನ್ ಆಗುತ್ತದೆ. ನಾವು ಬಾಯಿಮುಚ್ಚಿಕೊಂಡು ನೋಡಬೇಕು ಎಂದಿದ್ದರು. ಅವರ ಈ ಹೇಳಿಕೆ ರಜನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ರಜನಿ ಜೈಲರ್ ಸಿನಿಮಾಗೆ ಮೊದಲು ನಟಿಸಿದ್ದ ಎರಡೂ ಸಿನಿಮಾಗಳೂ ನಿರ್ಮಾಪಕರಿಗೆ ನಷ್ಟ ಮಾಡಿಲ್ಲ. ಅವರು ಸಾಲು ಸಾಲು ಫ್ಲಾಪ್ ಗಳನ್ನು ಯಾವಾಗ ಕೊಟ್ಟಿದ್ದಾರೆ ಎಂದು ಕಿಡಿ ಕಾರಿದ್ದಾರೆ.