ಬೆಂಗಳೂರು: ಡಾಲಿ ಧನಂಜಯ್ ನಾಳೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಅವರ ಹುಟ್ಟುಹಬ್ಬಕ್ಕೆ ಬಡವ ರಾಸ್ಕಲ್ ಸಿನಿಮಾ ತಂಡದಿಂದ ದೊಡ್ಡ ಸರ್ಪೈಸ್ ಕಾದಿದೆ.
ಈ ಮೊದಲು ಡಾಲಿ ಧನಂಜಯ್ ನಾಯಕರಾಗಿ ಅಭಿನಯಿಸಿದ್ದ ಬಡವ ರಾಸ್ಕಲ್ ಸಿನಿಮಾ ಅವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿತ್ತು. ಈಗ ಇದೇ ತಂಡ ಧನಂಜಯ್ ನಾಯಕರಾಗಿ ಮತ್ತೊಂದು ಸಿನಿಮಾ ಘೋಷಣೆ ಮಾಡಲಿದೆ.
ಇಂದು ಮಧ್ಯರಾತ್ರಿಯಿಂದಲೇ ನಂದಿ ಲಿಂಕ್ಸ್ ಗ್ರೌಂಡ್ಸ್ ನಲ್ಲಿ ಹುಟ್ಟುಹಬ್ಬದ ಸಂಭ್ರಮ ಶುರುವಾಗಲಿದೆ. ಇದೇ ಸಂದರ್ಭದಲ್ಲಿ ರಾತ್ರಿ 12.02 ಕ್ಕೆ ಬಡವ ರಾಸ್ಕಲ್ ಟೀಂನ ಹೊಸ ಸಿನಿಮಾ ಘೋಷಣೆಯಾಗಲಿದೆ. ಈ ಬಾರಿ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಸಿನಿಮಾ ಸೆಟ್ಟೇರಲಿದೆ.