ಹೈದರಾಬಾದ್: ಹಲವು ದಿನಗಳಿಂದ ಕಾಡುತ್ತಿದ್ದ ತಮ್ಮ ಮಂಡಿ ನೋವಿನ ಸಮಸ್ಯೆಗೆ ಕೊನೆಗೂ ಪ್ರಭಾಸ್ ಶಸ್ತ್ರಚಿಕಿತ್ಸೆಗೊಳಗಾಗಲು ನಿರ್ಧರಿಸಿದ್ದಾರೆ.
ಸದ್ಯಕ್ಕೆ ಪ್ರಭಾಸ್ ಸಲಾರ್ ಮತ್ತು ಪ್ರಾಜೆಕ್ಟ್ ಕೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಾಜೆಕ್ಟ್ ಕೆ ಸಿನಿಮಾಗೆ ಕಲ್ಕಿ ಎಡಿ 2898 ಎಂದು ಟೈಟಲ್ ಇಡಲಾಗಿದ್ದು, ಈ ಸಿನಿಮಾ ಅವರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ.
ಬಿಡುವಿಲ್ಲದೇ ದುಡಿಯುತ್ತಿದ್ದ ಪ್ರಭಾಸ್ ಈಗ ತಮ್ಮ ಮಂಡಿ ಶಸ್ತ್ರಚಿಕಿತ್ಸೆಗಾಗಿ ಶೂಟಿಂಗ್ ಗಳಿಂದ ತಾತ್ಕಾಲಿಕವಾಗಿ ಬ್ರೇಕ್ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಬಂದ ಬೆನ್ನಲ್ಲೇ ಅಭಿಮಾನಿಗಳು ಒಳ್ಳೆಯ ನಿರ್ಧಾರ ಎನ್ನುತ್ತಿದ್ದಾರೆ. ಬಾಹುಬಲಿ ಶೂಟಿಂಗ್ ಸಮಯದಲ್ಲಿ ಪ್ರಭಾಸ್ ಗೆ ಮಂಡಿ ನೋವಿನ ಸಮಸ್ಯೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ.