ಚೆನ್ನೈ: ಜೈಲರ್ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಸೂಪರ್ ಸ್ಟಾರ್ ರಜನೀಕಾಂತ್ ಈಗ ತಮ್ಮ ಮುಂದಿನ ಸಿನಿಮಾಗಳತ್ತ ಗಮನಹರಿಸಲಿದ್ದಾರೆ.
ರಜನಿ ಈಗಾಗಲೇ ಮಗಳು ಐಶ್ವರ್ಯಾ ನಿರ್ದೇಶನದಲ್ಲಿ ಒಂದು ಸಿನಿಮಾ ಮಾಡುತ್ತಿದ್ದಾರೆ. ಅದಾದ ಬಳಿಕ ಜೈ ಭೀಮ್ ಖ್ಯಾತಿಯ ನಿರ್ದೇಶಕ ಟಿ.ಎಸ್. ಜ್ಞಾನವೇಲು ನಿರ್ದೇಶನದಲ್ಲಿ 170 ನೇ ಸಿನಿಮಾ ಮಾಡಲಿದ್ದಾರೆ.
ಈ ಸಿನಿಮಾಗೆ ಮಲಯಾಳಂ ಸ್ಟಾರ್ ನಾಯಕಿ ಮಂಜು ವಾರಿಯರ್ ನಾಯಕಿಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಮಂಜು ವಾರಿಯರ್ ಬಹುಬೇಡಿಕೆಯ ನಟಿ. ಮಲಯಾಳಂನಲ್ಲಿ ಹಲವು ಸಿನಿಮಾಗಳಲ್ಲದೆ ತಮಿಳಿನಲ್ಲೂ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. ಈ ಸೌತ್ ಸುಂದರಿ ರಜನಿ ಮುಂದಿನ ನಾಯಕಿಯಾಗಲಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ.