ಬೆಂಗಳೂರು: ನಟ ಧ್ರುವ ಸರ್ಜಾ, ಪ್ರೇರಣಾ ಶಂಕರ್ ದಂಪತಿ ಈಗ ಎರಡನೇ ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ.
ತಾರೆಯರು ತಮ್ಮ ಜೀವನದ ಈ ವಿಶೇಷ ಗಳಿಗೆಯನ್ನು ವಿಶಿಷ್ಟವಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅದೇ ರೀತಿ ಧ್ರುವ ದಂಪತಿ ಕೂಡಾ ಕಾಡಿನ ಥೀಮ್ ಇರುವ ವಿಶೇಷ ವಿಎಫ್ ಎಕ್ಸ್ ವಿಡಿಯೋ ಮೂಲಕ ಈ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
ಧ್ರುವ ಮತ್ತು ಪ್ರೇರಣಾಗೆ ಈಗಾಗಲೇ ಒಂದು ವರ್ಷದ ಹೆಣ್ಣು ಮಗುವದೆ. ಇದೀಗ ಮತ್ತೊಬ್ಬ ಸರ್ಜಾ ಕುಡಿ ಸೇರ್ಪಡೆಯಾಗಲಿದ್ದಾರೆ ಎಂದು ಧ್ರುವ ಸಂಭ್ರಮ ಹಂಚಿಕೊಂಡಿದ್ದಾರೆ.