Publish Date: Thu, 24 Aug 2023 (16:51 IST)
Updated Date: Thu, 24 Aug 2023 (16:53 IST)
Photo Courtesy: Instagram
ಮಡಿಕೇರಿ: ಸ್ಯಾಂಡಲ್ ವುಡ್ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಇಂದು ಕೊಡಗಿನಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ.
12 ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಕೊಡಗಿನವರಾಗಿದ್ದರಿಂದ ಕೊಡಗಿನಲ್ಲಿ ಅಲ್ಲಿಯ ಸಂಪ್ರದಾಯದಂತೇ ವಿವಾಹವಾಗಿದ್ದಾರೆ. ಕೊಡವ ಶೈಲಿಯಲ್ಲಿ ಪೇಟ, ಸೀರೆ, ಸಂಪ್ರದಾಯಗಳು ಅಲ್ಲಿಗೆ ಕಣ್ಣಿಗೆ ಹಬ್ಬದಂತಾಗಿತ್ತು.
ಮದುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಟ ದೊಡ್ಡಣ್ಣ, ಜೈಜಗದೀಶ್ ದಂಪತಿ, ಗೋಲ್ಡನ್ ಸ್ಟಾರ್ ಗಣೇಶ್ ಕುಟುಂಬ, ನಟಿ ಅನುಪ್ರಭಾಕರ್ ಕುಟುಂಬಸ್ಥರು ಸೇರಿದಂತೆ ಹರ್ಷಿಕಾ, ಭುವನ್ ಆಪ್ತರು, ಕುಟುಂಬಸ್ಥರು ಆಗಮಿಸಿ ಶುಭ ಹಾರೈಸಿದ್ದಾರೆ.