Select Your Language

Notifications

webdunia
webdunia
webdunia
webdunia

Chef ಚಿದಂಬರನ ಪಾತ್ರಕ್ಕಾಗಿ ಬಾಣಸಿಗನ ಕೆಲಸ ಕಲಿಯುತ್ತಿದ್ದಾರೆ ನಟ ಅನಿರುದ್ಧ್

ಅನಿರುದ್ಧ್ ಜತ್ಕಾರ್
ಬೆಂಗಳೂರು , ಗುರುವಾರ, 24 ಆಗಸ್ಟ್ 2023 (17:01 IST)
ಬೆಂಗಳೂರು: Chef ಚಿದಂಬಂರ ಸಿನಿಮಾದಲ್ಲಿ ಅಭಿನಯಿಸುತ್ತಿರುವ ನಟ ಅನಿರುದ್ಧ್ ಜತ್ಕಾರ್ ಆ ಸಿನಿಮಾದಲ್ಲಿ ಬಾಣಸಿಗನ ಪಾತ್ರ ಮಾಡಲಿರುವುದು ಎಲ್ಲರಿಗೂ ಗೊತ್ತೇ ಇದೆ.

ಇದೀಗ ಆ ಸಿನಿಮಾದಲ್ಲಿ ಬಾಣಸಿಗನ ಪಾತ್ರ ನಿರ್ವಹಿಸಲು ತಾವೇ ಬಾಣಸಿಗರು ಮಾಡುವ ಕೆಲಸಗಳನ್ನು ನುರಿತರಿಂದ ಕಲಿಯುತ್ತಿದ್ದಾರೆ. ಬಾಣಸಿಗರೊಬ್ಬರ ಸಲಹೆ ಪಡೆದು ಚಾಕಚಕ್ಯತೆಯಿಂದ ತರಕಾರಿ ಕಟ್ ಮಾಡುವುದನ್ನು ಕಲಿಯುತ್ತಿದ್ದಾರೆ ಅನಿರುದ್ಧ್.

ರಾಘು ಸಿನಿಮಾ ಖ್ಯಾತಿಯ ಆನಂದ್ ರಾಜು ಕತೆ, ನಿರ್ದೇಶನದಲ್ಲಿ ‘Chef ಚಿದಂಬಂ’ ಎನ್ನುವ ಸಿನಿಮಾಗೆ ಅನಿರುದ್ಧ್ ನಾಯಕರಾಗಿದ್ದಾರೆ. ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಮತ್ತು ರಾಚೇಲ್ ಡೇವಿಡ್ ಅಭಿನಯಿಸುತ್ತಿದ್ದಾರೆ. ಇದೊಂದು ಡಾರ್ಕ್ ಕಾಮಿಡಿ ಥ್ರಿಲ್ಲರ್ ಆಗಿದ್ದು, ವಿಭಿನ್ನ ಕತೆಯೊಂದಿಗೆ ಆನಂದ್ ರಾಜು ನಿಮ್ಮ ಮುಂದೆ ಬರಲಿದ್ದಾರೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಕ್ತಾಯವಾಗಿದ್ದು, ಒಂದು ಟೀಸರ್ ಕೂಡಾ ಹೊರಬಿಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಡವ ಶೈಲಿಯಲ್ಲಿ ಹರ್ಷಿಕಾ-ಭುವನ್ ಅದ್ಧೂರಿ ವಿವಾಹ