Publish Date: Mon, 21 Aug 2023 (09:30 IST)
Updated Date: Mon, 21 Aug 2023 (09:30 IST)
ಅಯೋಧ್ಯಾ: ಉತ್ತರ ಪ್ರದೇಶ ಪ್ರವಾಸದಲ್ಲಿರುವ ನಟ ರಜನೀಕಾಂತ್ ಅಯೋಧ್ಯೆ ಶ್ರೀರಾಮನ ಬಂಟ ಹನುಮನ ದರ್ಶನ ಪಡೆದಿದ್ದಾರೆ.
ಪತ್ನಿ ಸಮೇತರಾಗಿ ಅಯೋಧ್ಯೆಯ ಹನುಮಗುಡಿಗೆ ಭೇಟಿ ನೀಡಿ ರಜನಿ ಪೂಜೆ ಸಲ್ಲಿಸಿದ್ದಾರೆ. ಇದಕ್ಕೆ ಮೊದಲು ಹಿಮಾಲಯದಲ್ಲಿ ತಮ್ಮ ಆದ್ಯಾತ್ಮಿಕ ಗುರುಗಳನ್ನು ಭೇಟಿ ಮಾಡಿದ್ದರು.
ಜೈಲರ್ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ರಜನಿ ತಮ್ಮ ಆಧ್ಯಾತ್ಮಿಕ ಯಾತ್ರೆ ಕೈಗೊಂಡಿದ್ದರು. ಉತ್ತರದಲ್ಲೂ ರಜನಿಗೆ ಅಪಾರ ಅಭಿಮಾನಿಗಳಿದ್ದು, ಹೋದಲೆಲ್ಲಾ ಭರ್ಜರಿ ಸ್ವಾಗತ ಸಿಗುತ್ತಿದೆ.