ಚೆನ್ನೈ: ಈ ವಾರ ಬಾಕ್ಸ್ ಆಫೀಸ್ ನಲ್ಲಿ ದಕ್ಷಿಣ ಭಾರತ ಸಿನಿಮಾ ರಂಗದ ಇಬ್ಬರು ಸ್ಟಾರ್ ಗಳು ಸ್ಪರ್ಧೆಗಿಳಿದಿದ್ದರು. ಆ ಪೈಕಿ ರಜನೀಕಾಂತ್ ಗೆ ಗೆಲುವಾಗಿದ್ದರೆ, ಚಿರಂಜೀವಿಗೆ ಸೋಲಾಗಿದೆ.
ರಜನಿ ಅಭಿನಯದ ಜೈಲರ್ ಆಗಸ್ಟ್ 10 ರಂದು ತೆರೆ ಕಂಡಿತ್ತು. ಈ ಸಿನಿಮಾ ಮೊದಲ ದಿನವೇ 48 ಕೋಟಿ ಕಲೆಕ್ಷನ್ ಮಾಡಿತ್ತು. ಮೂರು ದಿನಗಳಲ್ಲಿ 100 ಕೋಟಿ ಸಮೀಪ ಗಳಿಕೆ ಮಾಡಿದೆ. ಈ ಮೂಲಕ ರಜನಿ ವೃತ್ತಿ ಜೀವನ ಮತ್ತೊಂದು ಹಿಟ್ ಲಿಸ್ಟ್ ಗೆ ಜೈಲರ್ ಸೇರ್ಪಡೆಯಾಗಿದೆ.
ಆದರೆ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಭೋಲಾ ಶಂಕರ್ ಆಗಸ್ಟ್ 11 ರಂದು ಬಿಡುಗಡೆಯಾಗಿದ್ದು ಮೊದಲ ದಿನ ಗಳಿಸಿದ್ದು ಕೇವಲ 20 ಕೋಟಿ ರೂ. ಈ ಮೂಲಕ ಚಿರಂಜೀವಿಗೆ ಹ್ಯಾಟ್ರಿಕ್ ಸೋಲಾಗಿದೆ. ಇದಕ್ಕೆ ಮೊದಲು ಚಿರಂಜೀವಿ ಮಾಡಿದ್ದ ಆಚಾರ್ಯ, ಗಾಡ್ ಫಾದರ್ ಎರಡೂ ದಯನೀಯ ಸೋಲಾಗಿತ್ತು. ಈ ಸಾಲಿಗೆ ಭೋಲಾ ಶಂಕರ್ ಕೂಡಾ ಸೇರಿದೆ.