Photo Courtesy: Instagram
ಬೆಂಗಳೂರು: ನಟಿ ಹರಿಪ್ರಿಯಾ ಮದುವೆ ಬಳಿಕ ಮತ್ತೆ ಸಿನಿಮಾಗೆ ಕಮ್ ಬ್ಯಾಕ್ ಮಾಡಲು ರೆಡಿಯಾಗುತ್ತಿದ್ದಾರೆ. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದಾರೆ.
ವಸಿಷ್ಠ ಸಿಂಹ ಜೊತೆ ಮದುವೆಯಾದ ಬಳಿಕ ಹರಿಪ್ರಿಯಾ ಕೆಲವು ದಿನ ಕುಟುಂಬದ ಜೊತೆ ಕಾಲ ಕಳೆಯಲು ಸಿನಿಮಾಗಳಿಂದ ಬ್ರೇಕ್ ಪಡೆದಿದ್ದರು. ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಮದುವೆಯಾಗಿ ಆರು ತಿಂಗಳ ಬ್ರೇಕ್ ಪಡೆದು ಈಗ ಮತ್ತೆ ಸಿನಿಮಾಗೆ ಕಮ್ ಬ್ಯಾಕ್ ಮಾಡಲು ರೆಡಿಯಾಗಿದ್ದೇನೆ ಎಂದಿದ್ದಾರೆ ಹರಿಪ್ರಿಯಾ.
ಇದೀಗ ಹೊಸ ಸ್ಕ್ರಿಪ್ಟ್ ಒಂದನ್ನು ಓದುತ್ತಿದ್ದು, ಸದ್ಯದಲ್ಲೇ ಹೊಸ ಸಿನಿಮಾ ಯಾವುದು ಎಂಬ ಬಗ್ಗೆ ಅಪ್ ಡೇಟ್ ಕೊಡುವುದಾಗಿ ಹೇಳಿದ್ದಾರೆ.