ಚೆನ್ನೈ: ಜೈಲರ್ ಸಿನಿಮಾ ಬಿಡುಗಡೆಯಾಗಿ ಮೂರೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿಕೊಂಡಿದೆ. ಆದರೆ ಇತ್ತ ನಾಯಕ ರಜನೀಕಾಂತ್ ಮಾತ್ರ ಯಾವುದಕ್ಕೂ ತಲೆಯೇ ಕೆಡಿಸಿಕೊಳ್ಳದೇ ಹೃಷಿಕೇಶಕ್ಕೆ ತೆರಳಿದ್ದಾರೆ.
ಜೈಲರ್ ರಿಲೀಸ್ ದಿನವೇ ರಜನಿ ಹೃಷಿಕೇಶದತ್ತ ತೆರಳಿದ್ದಾರೆ. ಇದೀಗ ಇಲ್ಲಿ ರಜನಿ ಸಾಮಾನ್ಯನಂತೇ ಕಾಲ ಕಳೆಯುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಜನಿ ಆಗಾಗ ಮನಸ್ಸಿಗೆ ನೆಮ್ಮದಿ ಬೇಕಾದಾಗಲೆಲ್ಲಾ ಹಿಮಾಲಯಕ್ಕೆ ತೆರಳುತ್ತಾರೆ. ತಮ್ಮ ಗೆಳೆಯರೊಂದಿಗೆ ಸಾಮಾನ್ಯರಂತೇ ತಮ್ಮ ಆಧ್ಯಾತ್ಮಿಕ ಗುರುಗಳ ಆಶ್ರಮದಲ್ಲಿ ಕಾಲ ಕಳೆಯುತ್ತಾರೆ. ಈಗಲೂ ಇದೇ ರೀತಿ ಒಂದು ಆಧ್ಯಾತ್ಮಿಕ ಪಯಣ ನಡೆಸಿದ್ದಾರೆ.