ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ಖ್ಯಾತಿ ನಟಿ ಮೇಘಾ ಶೆಟ್ಟಿ ಸಖತ್ ಸೆಕ್ಸೀಯಾಗಿ ಕಾಣಿಸಿಕೊಂಡಿದ್ದಾರೆ. ಹೊಸ ಫೋಟೋ ಶೂಟ್ ನಲ್ಲಿ ಮಾಡ್ ಡ್ರೆಸ್ ನಲ್ಲಿ ಮಿಂಚಿದ್ದಾರೆ.
ಮೇಘಾ ಶೆಟ್ಟಿ ಸೀರಿಯಲ್ ನಲ್ಲಿ ಮತ್ತು ಸಿನಿಮಾಗಳಲ್ಲಿ ಇದುವರೆಗೆ ಮನೆ ಮಗಳು ಇಮೇಜ್ ನ ಲುಕ್ ನಲ್ಲೇ ಕಾಣಿಸಿಕೊಂಡಿದ್ದಾರೆ. ಆದರೆ ಕೆಲವು ಫೋಟೋ ಶೂಟ್ ಗಳಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ತಾವು ಅಂತಹ ಪಾತ್ರಗಳನ್ನೂ ಮಾಡಬಲ್ಲೆ ಎಂದು ಸಂದೇಶ ಕೊಟ್ಟಿದ್ದಾರೆ.
ಇದೀಗ ಡಿಸೈನರ್ ಲಕ್ಷ್ಮಿ ಕೃ಼ಷ್ಣ ಅವರು ಡಿಸೈನ್ ಮಾಡಿರುವ ತುಂಡುಡುಗೆಯಲ್ಲಿ ಮೇಘಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸಹಜವಾಗಿಯೇ ಆಕೆಯನ್ನು ಮನೆ ಮಗಳ ಇಮೇಜ್ ನಲ್ಲಿ ನೋಡಿದ್ದ ನೆಟ್ಟಿಗರು ಇಂತಹ ಡ್ರೆಸ್ ಗಿಂತ ಸಾಂಪ್ರದಾಯಿಕ ಉಡುಗೆಯಲ್ಲೇ ಚೆನ್ನಾಗಿ ಕಾಣಿಸುತ್ತೀರಿ ಎಂದು ಕಾಮೆಂಟ್ ಮಾಡಿದ್ದಾರೆ.