Publish Date: Sun, 03 Sep 2023 (09:10 IST)
Updated Date: Sun, 03 Sep 2023 (09:20 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ನಾಯಕರಾಗಿರುವ ಸೂಪರ್ ಹಿಟ್ ಸಿನಿಮಾ ಜೈಲರ್ ಒಟಿಟಿ ರಿಲೀಸ್ ದಿನಾಂಕ ಬಹಿರಂಗವಾಗಿದೆ.
ರಜನೀಕಾಂತ್ ಜೊತೆಗೆ ಶಿವರಾಜ್ ಕುಮಾರ್, ಮೋಹನ್ ಲಾಲ್ ಮುಂತಾದ ಸ್ಟಾರ್ ಗಳು ನಟಿಸಿರುವ ಸಿನಿಮಾ ಥಿಯೇಟರ್ ನಲ್ಲಿ 650 ಕೋಟಿ ರೂ. ಗಳಿಕೆ ಮಾಡಿತ್ತು. ಆಗಸ್ಟ್ 10 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು.
ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಸೆಪ್ಟೆಂಬರ್ 7 ರಿಂದ ಅಮೆಝೋನ್ ಪ್ರೈಮ್ ನಲ್ಲಿ ಜೈಲರ್ ಸಿನಿಮಾ ಪ್ರಸಾರ ಆರಂಭಿಸಲಿದೆ.