Select Your Language

Notifications

webdunia
webdunia
webdunia
webdunia

ವಿಶ್ವಕಪ್ ಫೈನಲ್: ಅಹಮ್ಮದಾಬಾದ್ ಪಿಚ್ ಯಾರಿಗೆ ಸಹಕಾರಿ? ಟಾಸ್ ಗೆದ್ದರೆ ಏನು ಮಾಡಬೇಕು?

ವಿಶ್ವಕಪ್ ಫೈನಲ್: ಅಹಮ್ಮದಾಬಾದ್ ಪಿಚ್ ಯಾರಿಗೆ ಸಹಕಾರಿ? ಟಾಸ್ ಗೆದ್ದರೆ ಏನು ಮಾಡಬೇಕು?
ಅಹಮ್ಮದಾಬಾದ್ , ಭಾನುವಾರ, 19 ನವೆಂಬರ್ 2023 (08:30 IST)
Photo Courtesy: Twitter
ಅಹಮ್ಮದಾಬಾದ್: ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದಿನ ಪಂದ್ಯ ನಡೆಯಲಿರುವ ಅಹಮ್ಮದಾಬಾದ್ ಪಿಚ್ ಹೇಗಿದೆ ನೋಡೋಣ.

ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಎಂತಹದ್ದೇ ಪಿಚ್ ಇದ್ದರೂ ಎದುರಾಳಿಗಳಿಗೆ ಕಂಟಕವಾಗುತ್ತಲೇ ಬಂದಿದ್ದಾರೆ. ಇದೀಗ ಫೈನಲ್ ಪಂದ್ಯಕ್ಕೆ ತಯಾರಾಗಿರುವ ಪಿಚ್ ಯಾರಿಗೆ ಸಹಕಾರಿ? ಟಾಸ್ ಗೆದ್ದರೆ ಏನು ಮಾಡಬೇಕು?

ಫೈನಲ್ ಪಂದ್ಯಕ್ಕೆ ತಯಾರಾಗಿರುವ ಪಿಚ್ ನಿಧಾನಗತಿಯದ್ದಾಗಿದ್ದು, ಇಲ್ಲಿ ರನ್ ಹೊಳೆ ಹರಿಯುವ ಸಂಭವ ಕಡಿಮೆ. ರನ್ ಗಳಿಸಲು ಕೊಂಚ ತಾಳ್ಮೆಯಿಂದ ಬ್ಯಾಟಿಂಗ್ ಮಾಡಬೇಕಾದೀತು. ಇದಕ್ಕೆ ಮೊದಲು ಟೀಂ ಇಂಡಿಯಾ ಪಾಕಿಸ್ತಾನ ನಡುವಿನ ಪಂದ್ಯ ಇದೇ ಮೈದಾನದಲ್ಲಿ ನಡೆದಿತ್ತು. ಆಗ ಭಾರತ ದ್ವಿತೀಯ ಬ್ಯಾಟಿಂಗ್ ಮಾಡಿ ಗೆಲುವು ಕಂಡುಕೊಂಡಿತ್ತು.

ಅಹಮ್ಮದಾಬಾದ್ ನಲ್ಲಿ ನಡೆದ ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗಿಲ್ಲ. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 300 ರ ಗಡಿ ತಲುಪಿದರೂ ಉತ್ತಮ ಸ್ಕೋರ್ ಎನಿಸಿಕೊಳ್ಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್ ಫೈನಲ್: 2003 ರ ಲೆಕ್ಕ 2023 ರಲ್ಲಿ ಚುಕ್ತಾ?