ಅಹಮ್ಮದಾಬಾದ್: ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂದು ಪಂದ್ಯ ಆರಂಭಕ್ಕೆ ಮುನ್ನ ಭಾರತೀಯ ವಾಯುಸೇನೆಯ ಹೆಮ್ಮೆಯ ಸೂರ್ಯಕಿರಣ್ ವಿಮಾನಗಳು ಚಿತ್ತಾರ ಮೂಡಿಸಿದವು.
ಸೂರ್ಯಕಿರಣ್ ವಿಮಾನಗಳು ನಿನ್ನೆಯೇ ಇದಕ್ಕಾಗಿ ತಾಲೀಮು ನಡೆಸಿದ್ದವು. ಅದರಂತೆ ಇಂದು ಲಕ್ಷಾಂತರ ಮಂದಿ ಹಾಜರಿರುವ ಮೈದಾನದ ಮೇಲೆ ಬಣ್ಣ ಬಣ್ಣದ ರಂಗು ಮೂಡಿಸುತ್ತಾ ಆಕರ್ಷಣೀಯ ವೈಮಾನಿಕ ಪ್ರದರ್ಶನ ನೀಡಿವೆ.
ಕ್ರಿಕೆಟ್ ಜೊತೆಗೆ ಇಂದು ಬಿಸಿಸಿಐ ಪ್ರೇಕ್ಷಕರಿಗಾಗಿ ಅನೇಕ ಮನರಂಜನೆ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದೆ. ಅದರಂತೆ ಸೂರ್ಯಕಿರಣ್ ಶೋ ನೀಡಿವೆ. ಇದಾದ ಬಳಿಕ ಪ್ರಮುಖ ಗಾಯಕರು ತಮ್ಮ ಹಾಡುಗಳಿಂದ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಜೊತೆಗೆ ಲೈಟ್ ಶೋ ಕೂಡಾ ಇರಲಿದೆ.