ಮುಂಬೈ: ವಿಶ್ವಕಪ್ 2023 ಫೈನಲ್ ಸೋಲಿನ ಹತಾಶೆ ಮರೆಯುವ ಮುನ್ನವೇ ಟೀಂ ಇಂಡಿಯಾ ಮತ್ತೆ ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡಲಿದೆ.
									
			
			 
 			
 
 			
					
			        							
								
																	ನವಂಬರ್ 23 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಪಂದ್ಯಕ್ಕೆ ಆಸ್ಟ್ರೇಲಿಯಾ ವಿಶ್ವಕಪ್ ನಲ್ಲಿ ಆಡಿರುವ ತಂಡವನ್ನೇ ಕಣಕ್ಕಿಳಿಸುತ್ತಿದೆ.
									
										
								
																	ಆದರೆ ಟೀಂ ಇಂಡಿಯಾ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮುಂತಾದವರಿಗೆ ವಿಶ್ರಾಂತಿ ನೀಡಿ ಕಿರಿಯರ ತಂಡವನ್ನು ಕಣಕ್ಕಿಳಿಸುತ್ತಿದೆ.
									
											
							                     
							
							
			        							
								
																	ಈಗಷ್ಟೇ ಏಕದಿನ ವಿಶ್ವಕಪ್ ಟೂರ್ನಮೆಂಟ್ ಸೋಲಿನ ಹತಾಶೆಯಲ್ಲಿರುವ ಅಭಿಮಾನಿಗಳಿಗೆ ಈ ಸರಣಿ ಗೆಲುವು ಕೊಂಚ ನೆಮ್ಮದಿ ನೀಡಬಹುದು. ಸರಣಿಯ ಮೊದಲ ಪಂದ್ಯ ವಿಶಾಖಪಟ್ಟಣಂನಲ್ಲಿ ನಡೆಯಲಿದೆ.  ಎರಡನೇ ಪಂದ್ಯ ನ.26 ರಂದು ತಿರುವನಂತಪುರಂನಲ್ಲಿ, ಮೂರನೇ ಪಂದ್ಯ ನ.28 ರಂದು ಗುವಾಹಟಿಯಲ್ಲಿ, ನಾಲ್ಕನೇ ಪಂದ್ಯ ಡಿ.1 ರಂದು ನಾಗ್ಪುರದಲ್ಲಿ ಮತ್ತು ಅಂತಿಮ ಪಂದ್ಯ ಡಿ.3 ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ.