Select Your Language

Notifications

webdunia
webdunia
webdunia
webdunia

ಋತುರಾಜ್ ಗಾಯಕ್ ವಾಡ್ ನಾಯಕತ್ವವನ್ನು ಧೋನಿಗೆ ಹೋಲಿಸಿದ ನೆಟ್ಟಿಗರು

ಋತುರಾಜ್ ಗಾಯಕ್ ವಾಡ್ ನಾಯಕತ್ವವನ್ನು ಧೋನಿಗೆ ಹೋಲಿಸಿದ ನೆಟ್ಟಿಗರು
ಹ್ಯಾಂಗ್ ಝೂ , ಶನಿವಾರ, 7 ಅಕ್ಟೋಬರ್ 2023 (16:32 IST)
Photo Courtesy: Twitter
ಹ್ಯಾಂಗ್ ಝೂ: ಯುವ ಪಡೆಯನ್ನು ಕಟ್ಟಿಕೊಂಡು ಏಷ್ಯನ್ ಗೇಮ್ಸ್ ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದ ಋತುರಾಜ್ ಗಾಯಕ್ ವಾಡ್ ಈಗ ಕ್ರಿಕೆಟ್ ಪ್ರಿಯರ ಪಾಲಿಗೆ ಹೀರೋ ಆಗಿದ್ದಾರೆ.

ಋತುರಾಜ್ ಗಾಯಕ್ ವಾಡ್ ತಂಡದಲ್ಲಿ ಬಹುತೇಕ ಐಪಿಎಲ್ ಹೀರೋಗಳೇ ಇದ್ದರು. ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವ ಪಡೆದಿದ್ದವರು ಕಡಿಮೆಯಾಗಿದ್ದರು. ಹಾಗಿದ್ದರೂ ಈ ಏಷ್ಯನ್ ಗೇಮ್ಸ್ ನಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಗಾಯಕ್ ವಾಡ್ ಬೌಲರ್ ಗಳನ್ನು ಬದಲಾಯಿಸಿದ್ದು, ಫೀಲ್ಡ್ ಸೆಟ್ ಮಾಡಿದ್ದು ಸೇರಿದಂತೆ ತಂಡವನ್ನು ಮುನ್ನಡೆಸಿದ ಪರಿ ಎಲ್ಲರ ಹೊಗಳಿಕೆಗೆ ಕಾರಣವಾಗಿದೆ.

ಈ ಹಿಂದೆ 2007 ರಲ್ಲಿ ಧೋನಿ ಮೊದಲ ಬಾರಿಗೆ ತಂಡದ ನಾಯಕತ್ವ ವಹಿಸಿದ್ದಾಗಲೂ ಇದೇ ರೀತಿ ತಂಡದಲ್ಲಿ ಬಹುತೇಕ ಯುವ ಆಟಗಾರರಿದ್ದರು. ಹಾಗಿದ್ದರೂ ಧೋನಿ ತಮ್ಮ ಚಾಣಕ್ಷ್ಯ ನಾಯಕತ್ವದಿಂದಾಗಿ ಟಿ20 ವಿಶ್ವಕಪ್ ಗೆದ್ದಿದ್ದರು. ಇದೀಗ ನೆಟ್ಟಿಗರು ಋತುರಾಜ್ ಗಾಯಕ್ ವಾಡ್ ನಾಯಕತ್ವವನ್ನೂ ಅಂದಿನ ಧೋನಿ ನಾಯಕತ್ವಕ್ಕೆ ಹೋಲಿಕೆ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯನ್ ಗೇಮ್ಸ್: ಕ್ರಿಕೆಟ್, ಕಬಡ್ಡಿ ಸೇರಿದಂತೆ ಭಾರತಕ್ಕೆ ಇಂದು ಪದಕದ ಮಳೆ