Select Your Language

Notifications

webdunia
webdunia
webdunia
webdunia

ಪತ್ನಿಯ ಮೆಂಟಲ್ ಟಾರ್ಚರ್ ಬಗ್ಗೆ ಕೋರ್ಟ್ ನಲ್ಲಿ ಶಿಖರ್ ಧವನ್ ಹೇಳಿದ್ದೇನು?

ಪತ್ನಿಯ ಮೆಂಟಲ್ ಟಾರ್ಚರ್ ಬಗ್ಗೆ ಕೋರ್ಟ್ ನಲ್ಲಿ ಶಿಖರ್ ಧವನ್ ಹೇಳಿದ್ದೇನು?
ನವದೆಹಲಿ , ಶುಕ್ರವಾರ, 6 ಅಕ್ಟೋಬರ್ 2023 (19:16 IST)
Photo Courtesy: Twitter
ನವದೆಹಲಿ: ಸೆಲೆಬ್ರಿಟಿಗಳಲ್ಲಿ ಮದುವೆ, ಡಿವೋರ್ಸ್ ಇತ್ತೀಚೆಗಿನ ದಿನಗಳಲ್ಲಿ ಕಾಮನ್. ಆದರೆ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಬಾಳಿನಲ್ಲಿ ನಡೆದ ಘಟನೆ ನಿಜಕ್ಕೂ ಖೇದಕರ.

ಧವನ್ ತಮ್ಮ ಪತ್ನಿ ಆಯೆಷಾಳಿಂದ ಅನುಭವಿಸಿದ ಕಿರುಕುಳ ಇದೀಗ ಬಹಿರಂಗವಾಗಿದೆ. ಪತ್ನಿಯಿಂದ ಮಾನಸಿಕ ಕಿರುಕುಳ ಆರೋಪ ಸಾಬೀತಾದ ಹಿನ್ನಲೆಯಲ್ಲಿ ದೆಹಲಿ ಕೋರ್ಟ್ ಧವನ್ ಗೆ ಪತ್ನಿಯಿಂದ ವಿಚ್ಛೇದನ ಪುರಸ್ಕರಿಸಿದೆ.

ಶಿಖರ್ ಮತ್ತು ಆಯೆಷಾ ಮದುವೆಯಾಗಿದ್ದು 2012 ರಲ್ಲಿ. ಆಸ್ಟ್ರೇಲಿಯಾ ಮೂಲದ, ಎರಡು ಹೆಣ್ಣು ಮಕ್ಕಳ ತಾಯಿ, ವಿಚ್ಛೇದಿತೆ ಆಯೆಷಾಳನ್ನು ಧವನ್ ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಧವನ್-ಆಯೆಷಾಗೆ ಒಬ್ಬ ಪುತ್ರ ಜನಿಸಿದ್ದ. ಆದರೆ ಮದುವೆಗೆ ಮೊದಲು ಭರವಸೆ ನೀಡಿದಂತೆ ಧವನ್ ಜೊತೆ ಆಯೆಷಾ ಭಾರತದಲ್ಲಿ ಇದ್ದಿದ್ದೇ ಕಡಿಮೆ. ತನ್ನ ಇಬ್ಬರು ಹೆಣ್ಣು ಮಕ್ಕಳ ನೆಪವೊಡ್ಡಿ ಹೆಚ್ಚಾಗಿ ಆಸ್ಟ್ರೇಲಿಯಾದಲ್ಲೇ ಮಗನ ಜೊತೆ ಕಾಲ ಕಳೆದಿದ್ದರು. ಭಾರತಕ್ಕೆ ಹಿಂದೊಮ್ಮೆ ಬಂದು ಕೆಲವು ದಿನ ಇದ್ದಾಗಲೂ ಆಸ್ಟ್ರೇಲಿಯಾದಲ್ಲಿರುವ ತನ್ನಇಬ್ಬರು ಹೆಣ್ಣು ಮಕ್ಕಳಿಗೆ ಸಾವಿರಾರು ಡಾಲರ್ ಹಣ ಸಂದಾಯ ಮಾಡಲು ಧವನ್ ಗೆ ಒತ್ತಾಯಿಸಿದ್ದರು. ಅಲ್ಲದೆ, ಅವರ ವಿದ್ಯಾಭ್ಯಾಸದ ಶುಲ್ಕವನ್ನೂ ಧವನ್ ಪಾವತಿಸಿದ್ದರು.

ತನ್ನ ಮಾಜಿ ಗಂಡನ ಜೊತೆಗಿನ ಕಮಿಟ್ ಮೆಂಟ್ ನಿಂದಾಗಿ ತನಗೆ ಆಸ್ಟ್ರೇಲಿಯಾ ಬಿಟ್ಟು ಬರಲು ಸಾಧ್ಯವಿಲ್ಲ ಎಂದು ಧವನ್ ಗೆ ಹೇಳುತ್ತಿದ್ದರು. ಹೀಗಾಗಿ ಎಷ್ಟೇ ಒತ್ತಾಯಿಸಿದರೂ ಅವರು ಭಾರತಕ್ಕೆ ಬರಲಿಲ್ಲ. ಮಗನನ್ನೂ ಬಿಡುತ್ತಿರಲಿಲ್ಲ. ಮದುವೆಯಾದರೂ ಪತ್ನಿ, ಮಗನ ಜೊತೆಗಿರಲು ಆಗದೇ ಧವನ್ ಮಾನಸಿಕ ಹಿಂಸೆ ಅನುಭವಿಸಿದ್ದರು. ಕೋವಿಡ್ ಸಮಯದಲ್ಲಿ ಧವನ್ ಅವರ ಅನಾರೋಗ್ಯಪೀಡಿತ ತಂದೆಯನ್ನು ನೋಡಿಕೊಳ್ಳಲೂ ಆಯೆಷಾ ವಿರೋಧಿಸಿದ್ದರು ಎನ್ನಲಾಗಿದೆ.

ಇದಲ್ಲದೆ, ಧವನ್ ಗೆ ಒತ್ತಾಯಿಸಿ ಆಸ್ಟ್ರೇಲಿಯಾದಲ್ಲಿ ಧವನ್ ಹಣದಲ್ಲಿಯೇ ಖರೀದಿಸಿದ ಎರಡು ಆಸ್ತಿಯನ್ನು ಆಯೆಷಾ ತನ್ನ ಹೆಸರಿಗೆ ಬರೆಯಿಸಿಕೊಂಡಿದ್ದರು. ಅಲ್ಲದೆ, ಇನ್ನೊಂದು ಆಸ್ತಿಗೆ ಜಂಟಿ ಹಕ್ಕುದಾರಳಾಗಿ ಮಾಡಿಕೊಂಡಿದ್ದರು. ಇದೆಲ್ಲದಕ್ಕೂ ಧವನ್ ಹಣ ಪಾವತಿಸಿದ್ದರು.

ಇದೀಗ ಆಯೆಷಾ ಮೇಲಿನ ಆರೋಪಗಳು ಸಾಬೀತಾದ್ದರಿಂದ ಧವನ್ ಗೆ ವಿಚ್ಛೇದನ ಪುರಸ್ಕರಿಸಿದ ಕೋರ್ಟ್ ಶಾಲಾ ರಜಾ ದಿನಗಳಲ್ಲಿ ಕೆಲವು ಸಮಯ ಪುತ್ರನನ್ನು ಧವನ್ ಮತ್ತು ಅವರ ಕುಟುಂಬದವರ ಜೊತೆ ಇರಿಸಿಕೊಳ್ಳಲು ಅವಕಾಶ ನೀಡಿ ತೀರ್ಪು ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯನ್ ಗೇಮ್ಸ್ ಕ್ರಿಕೆಟ್: ಟೀಂ ಇಂಡಿಯಾ ಫೈನಲ್ ಗೆ, ಪದಕ ಖಚಿತ