ಹ್ಯಾಂಗ್ ಝೂ: ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾಗೆ ಗೆಲ್ಲಲು ಬಾಂಗ್ಲಾದೇಶ 97 ರನ್ ಗಳ ಗುರಿ ನೀಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿತು. ಭಾರತದ ಪರ ಸಾಯಿ ಕಿಶೋರ್ 3, ವಾಷಿಂಗ್ಟನ್ ಸುಂದರ್ 2, ಅರ್ಷ್ ದೀಪ್ ಸಿಂಗ್, ಶಹಬಾದ್ ಅಹಮ್ಮದ್, ರವಿ ಬಿಷ್ಣೋಯ್, ತಿಲಕ್ ವರ್ಮ ತಲಾ 1 ವಿಕೆಟ್ ಕಬಳಿಸಿದರು. ಭಾರತ ನಿಯಮಿತವಾಗಿ ವಿಕೆಟ್ ಕೀಳುತ್ತಾ ಸಾಗಿದ್ದರಿಂದ ಬಾಂಗ್ಲಾಗೆ ರನ್ ಗತಿ ಏರಿಸಲು ಸಾಧ್ಯವಾಗಲೇ ಇಲ್ಲ.
ಈ ಮೊತ್ತ ಬೆನ್ನತ್ತಿರುವ ಟೀಂ ಇಂಡಿಯಾ ಇದೀಗ 2 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 15 ರನ್ ಗಳಿಸಿದೆ. ಕಳೆದ ಪಂದ್ಯದ ಶತಕ ವೀರ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ನಿರ್ಗಮಿಸಿ ಆಘಾತ ನೀಡಿದ್ದಾರೆ. ಇದೀಗ ಋತುರಾಜ್ ಗಾಯಕ್ ವಾಡ್, ತಿಲಕ್ ವರ್ಮ ಕ್ರೀಸ್ ನಲ್ಲಿದ್ದಾರೆ.