Select Your Language

Notifications

webdunia
webdunia
webdunia
webdunia

ಏಷ್ಯನ್ ಗೇಮ್ಸ್: ಜ್ಯಾವೆಲಿನ್ ಥ್ರೋನಲ್ಲಿ ಚೀನಾ ಅಧಿಕಾರಿಗಳಿಂದ ನೀರಜ್, ಕಿಶೋರ್ ಗೆ ಚೀಟಿಂಗ್

ಏಷ್ಯನ್ ಗೇಮ್ಸ್: ಜ್ಯಾವೆಲಿನ್ ಥ್ರೋನಲ್ಲಿ ಚೀನಾ ಅಧಿಕಾರಿಗಳಿಂದ ನೀರಜ್, ಕಿಶೋರ್ ಗೆ ಚೀಟಿಂಗ್
ಹ್ಯಾಂಗ್ ಝೂ , ಬುಧವಾರ, 4 ಅಕ್ಟೋಬರ್ 2023 (17:25 IST)
Photo Courtesy: Twitter
ಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಪುರುಷರ ಜ್ಯಾವೆಲಿನ್ ಥ್ರೋ ವಿಭಾಗದ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಮತ್ತು ಕಿಶೋರ್ ಜೀನಾಗೆ ಅಧಿಕಾರಿಗಳಿಂದ ಮೋಸವಾಗಿದೆ.

ಮೊದಲು ನೀರಜ್ ಚೋಪ್ರಾ ಮೊದಲ ಎಸೆತವನ್ನು ಅಧಿಕಾರಿಗಳು ಸರಿಯಾಗಿ ಗುರುತಿಸದೇ ತಾಂತ್ರಿಕ ವೈಫಲ್ಯದ ಕಾರಣ ನೀಡಿ ಮತ್ತೊಮ್ಮೆ ಥ್ರೋ ಮಾಡಲು ಸೂಚಿಸಲಾಯಿತು. ಮೊದಲ ಎಸೆತದಲ್ಲಿ ನೀರಜ್ 85 ಮೀ. ಗೂ ಅಧಿಕ ದೂರ ಎಸೆದಿದ್ದರು. ಆದರೆ ಇದು ಪರಿಗಣಿತವಾಗಲೇ ಇಲ್ಲ. ಹಾಗಿದ್ದರೂ ನೀರಜ್ ಮೊದಲ ಸ್ಥಾನ ಕಾಯ್ದುಕೊಂಡಿದ್ದರು.

ಇನ್ನು, ಭಾರತದ ಮತ್ತೊಬ್ಬ ಸ್ಪರ್ಧಿ ಕಿಶೋರ್ ಕೂಡಾ ಸ್ಪರ್ಧಾ ಕಣದಲ್ಲಿದ್ದರು. ಅವರು ಎರಡನೇ ಸ್ಥಾನವನ್ನು ಕಾಯ್ದುಕೊಂಡಿದ್ದರು. ಆದರೆ ಕಿಶೋರ್ ಎರಡನೇ ಎಸೆತವನ್ನು ಸುಖಾ ಸುಮ್ಮನೇ ಫೌಲ್ ಎಂದು ಘೋಷಿಸಲಾಯಿತು. ಕಿಶೋರ್ ಲೈನ್ ಮೀರಿ ಕಾಲು ಇರಿಸಿದ್ದರೆಂದು ಅಧಿಕಾರಿಗಳು ಫೌಲ್ ನೀಡಿದರು. ಆದರೆ ಅಸಲಿಗೆ ಕಿಶೋರ್ ಕಾಲು ಲೈನ್ ಒಳಗೇ ಇತ್ತು. ಇದನ್ನು ಗುರುತಿಸಿದ್ದ ನೀರಜ್ ಚೋಪ್ರಾ ಕಿಶೋರ್ ಪರವಾಗಿ ಅಧಿಕಾರಿಗಳೊಂದಿಗೆ ಮಾತನಾಡಿ ತೀರ್ಪು ಮರುಪರಿಶೀಲಿಸಲು ಸೂಚಿಸಿದರು. ರಿಪ್ಲೈ ನೋಡಿದ ನಂತರ ಫೌಲ್ ಹಿಂಪಡೆಯಲಾಯಿತು. ಈ ಎರಡೂ ಘಟನೆಗಳು ಸ್ಥಳದಲ್ಲಿ ಭಾರತೀಯ ಅಧಿಕಾರಿಗಳನ್ನು, ಅಭಿಮಾನಿಗಳನ್ನು ಆಕ್ರೋಶಗೊಳ್ಳುವಂತೆ ಮಾಡಿತು.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯನ್ ಗೇಮ್ಸ್ ಪದಕ ಪಟ್ಟಿಯಲ್ಲಿ ಭಾರತದ ದಾಖಲೆ