Publish Date: Wed, 04 Oct 2023 (08:30 IST)
Updated Date: Wed, 04 Oct 2023 (08:55 IST)
ಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಆರ್ಚರಿ ಪಟುಗಳು ಇಂದು ಬೆಳಿಗ್ಗೆಯೇ ಚಿನ್ನದ ಪದಕ ಬೇಟೆಯಾಡಿದ್ದಾರೆ.
ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಜ್ಯೋತಿ ವೆಣ್ಣಮ್ ಮತ್ತು ಓಜಸ್ ಜೋಡಿ 159 ಅಂಕ ಸಂಪಾದಿಸುವುದರೊಂದಿಗೆ ರಿಪಬ್ಲಿಕ್ ಆಫ್ ಕೊರಿಯಾ ಸ್ಪರ್ಧಿಗಳನ್ನು ಹಿಂದಿಕ್ಕಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ನಿನ್ನೆ ಮಂಗಳವಾರ ಭಾರತ ಒಟ್ಟು ಎರಡು ಚಿನ್ನ, ಎರಡು ರಜತ ಪದಕ ಸೇರಿದಂತೆ 9 ಪದಕ ತನ್ನದಾಗಿಸಿಕೊಂಡಿತ್ತು. ಇಂದು ಭಾರತದ ಸ್ಟಾರ್ ಕ್ರೀಡಾಪಟುಗಳಾದ ಪಿ.ವಿ. ಸಿಂಧು ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ, ಜ್ವಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಕಣದಲ್ಲಿದ್ದಾರೆ. ಅಲ್ಲದೆ ಸ್ಕ್ವಾಶ್ ನಲ್ಲಿ ಮೂರು ಪದಕ ಖಾತ್ರಿಯಾಗಿದೆ.