ಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಒಟ್ಟು ಪದಕದ ಬೇಟೆ 56 ಕ್ಕೇರಿದೆ. ಇಂದು ಮಹಿಳೆಯರ ಟೇಬಲ್ ಟೆನಿಸ್ ನಲ್ಲಿ ಭಾರತದ ಜೋಡಿ ಕಂಚಿನ ಪದಕ ಗೆದ್ದು ದಾಖಲೆ ಮಾಡಿದೆ.
ಭಾರತದ ಸುತೀರ್ಥ ಮುಖರ್ಜಿ, ಐಹಿಕ ಮುಖರ್ಜಿ ಜೋಡಿ ಟೇಬಲ್ ಟೆನಿಸ್ ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇದು ಈ ವಿಭಾಗದಲ್ಲಿ ಭಾರತದ ಮೊದಲ ಪದಕ ಎನ್ನುವುದು ವಿಶೇಷ.
ಇನ್ನು, ಮಹಿಳೆಯರ 3000 ಮೀ. ಕಾಲೋಟದ ವಿಭಾಗದಲ್ಲಿ ಪಾರುಲ್ ಚೌಧರಿ ಮತ್ತು ಪ್ರೀತಿ ಲಂಬ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.