ಹ್ಯಾಂಗ್ ಝೂ: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನ ಪುರುಷರ ಸ್ಕ್ವಾಶ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.
ಇನ್ನು ಟೆನಿಸ್ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ-ಋತುರಾಜ್ ಭೋಸಾಲೆ ಫೈನಲ್ ಗೆದ್ದು ಮತ್ತೊಂದು ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.
ಇದರೊಂದಿಗೆ ಭಾರತ ಈಗ ಒಟ್ಟು 10 ಚಿನ್ನದ ಪದಕ ಗೆದ್ದುಕೊಂಡಂತಾಗಿದೆ. ಭಾರತಕ್ಕೆ ತೀವ್ರ ನಿರಾಸೆ ಉಂಟು ಮಾಡಿದ್ದು ಒಲಿಂಪಿಕ್ ಪದಕ ವಿಜೇತೆ ಮೀರಾ ಭಾಯಿ ಚಾನು. 49 ಕೆ.ಜಿ. ವೈಟ್ ಲಿಫ್ಟಿಂಗ್ ವಿಭಾಗದಲ್ಲಿ ಮೀರಾ ಭಾಯಿ ಗಾಯಗೊಂಡು ಪದಕದ ರೇಸ್ ನಿಂದ ಹೊರಬಿದ್ದಿದ್ದಾರೆ.