Select Your Language

Notifications

webdunia
webdunia
webdunia
webdunia

ಶುಬ್ಮನ್ ಗಿಲ್ ಆರೋಗ್ಯದ ಬಗ್ಗೆ ಅಪ್ ಡೇಟ್ ಕೊಟ್ಟ ರಾಹುಲ್ ದ್ರಾವಿಡ್

ಶುಬ್ಮನ್ ಗಿಲ್ ಆರೋಗ್ಯದ ಬಗ್ಗೆ ಅಪ್ ಡೇಟ್ ಕೊಟ್ಟ ರಾಹುಲ್ ದ್ರಾವಿಡ್
ಚೆನ್ನೈ , ಶುಕ್ರವಾರ, 6 ಅಕ್ಟೋಬರ್ 2023 (19:24 IST)
ಚೆನ್ನೈ: ಏಕದಿನ ವಿಶ್ವಕಪ್ ಆರಂಭಿಕ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾಗೆ ಶುಬ್ಮನ್ ಗಿಲ್ ಅನಾರೋಗ್ಯ ಶಾಕ್ ನೀಡಿದೆ. ಶುಬ್ಮನ್ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ.

ಹೀಗಾಗಿ ಅವರು ಆಸ್ಟ್ರೇಲಿಯಾ ವಿರುದ್ಧ ಭಾನುವಾರ ನಡೆಯಲಿರುವ ಮೊದಲ ಪಂದ್ಯಕ್ಕೆ ಲಭ್ಯರಾಗುವುದು ಅನುಮಾನ ಎನ್ನಲಾಗಿದೆ. ಈ ಬಗ್ಗೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮಾಹಿತಿ ನೀಡಿದ್ದಾರೆ.

ಶುಬ್ಮನ್ ಭಾರತ ತಂಡಕ್ಕೆ ಪ್ರಮುಖ ಆಟಗಾರನಾಗಿದ್ದು, ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಹೀಗಿರುವ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹೊಡೆತ ನೀಡಲಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ದ್ರಾವಿಡ್, ‘ಶುಬ್ಮನ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಮೊದಲ ಪಂದ್ಯಕ್ಕೆ ಲಭ್ಯರಿರಲ್ಲ ಎಂದು ಈಗಲೇ ಹೇಳಲಾಗದು. ನಾಳೆ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ’ ಎಂದಿದ್ದಾರೆ. ದ್ರಾವಿಡ್ ಮಾತುಗಳು ಅಭಿಮಾನಿಗಳಲ್ಲಿ ಭರವಸೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಮೆಂಟಲ್ ಟಾರ್ಚರ್ ಬಗ್ಗೆ ಕೋರ್ಟ್ ನಲ್ಲಿ ಶಿಖರ್ ಧವನ್ ಹೇಳಿದ್ದೇನು?