ದುಬೈ: ಸಂಪ್ರದಾಯದಂತೇ ಐಸಿಸಿ 2023 ರ ಏಕದಿನ ವಿಶ್ವಕಪ್ ಟೂರ್ನಿಯ ಕನಸಿನ ತಂಡವನ್ನು ಪ್ರಕಟಿಸಿದ್ದು, ರೋಹಿತ್ ಶರ್ಮಾರನ್ನು ನಾಯಕರಾಗಿ ಮಾಡಿದೆ.
ವಿಶೇಷವೆಂದರೆ ಈ ಬಾರಿ ಪ್ರಶಸ್ತಿ ಗೆದ್ದಿದ್ದು ಆಸ್ಟ್ರೇಲಿಯಾವೇ ಆದರೂ ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದು ಟೀಂ ಇಂಡಿಯಾ. ಒಂದು ವೇಳೆ ಅಂತಿಮ ಪಂದ್ಯದಲ್ಲಿ ಟಾಸ್ ಭಾರತದ ಪರವಾಗಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗುತ್ತಿತ್ತೇನೋ.
ಅದೇನೇ ಇರಲಿ, ಇದೀಗ ಐಸಿಸಿ ತನ್ನ ಕನಸಿನ ತಂಡದಲ್ಲಿ ಬಹುಪಾಲು ಭಾರತೀಯ ಕ್ರಿಕೆಟಿಗರನ್ನು ಸೇರಿಸಿದೆ. ಒಟ್ಟು ಆರು ಭಾರತೀಯ ಕ್ರಿಕೆಟಿಗರು ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ಐಸಿಸಿ ಪ್ರಕಟಿಸಿರುವ ಡ್ರೀಮ್ ಇಲೆವೆನ್ ತಂಡ ಹೀಗಿದೆ.
ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ವಿರಾಟ್ ಕೊಹ್ಲಿ, ಡೆರಿಲ್ ಮಿಚೆಲ್, ಕೆಎಲ್ ರಾಹುಲ್, ಗ್ಲೆನ್ ಮ್ಯಾಕ್ಸ್ ವೆಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ದಿಲ್ಶನ್ ಮದುಶಂಕ, ಆಡಂ ಝಂಪ, ಮೊಹಮ್ಮದ್ ಶಮಿ, 12 ನೇ ಆಟಗಾರನಾಗಿ ಜೆರಾಲ್ಡ್ ಕೋಜೀ.