ಸಿಡ್ನಿ: ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ನಲ್ಲಿ ಅತಿಥೇಯ ಭಾರತ ತಂಡವನ್ನು ಸೋಲಿಸಿದ ಆಸ್ಟ್ರೇಲಿಯಾ ತಂಡ ಈಗ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದೆ.
									
			
			 
 			
 
 			
					
			        							
								
																	ಆದರೆ ಅದೇ ಈಗ ಅತಿರೇಕಕ್ಕೆ ಹೋಗಿದೆ. ಆಸ್ಟ್ರೇಲಿಯಾ ಮಾಧ‍್ಯಮವೊಂದು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅವಮಾನ ಮಾಡುವಂತಹ ವ್ಯಂಗ್ಯ ಚಿತ್ರವೊಂದನ್ನು ಪೋಸ್ಟ್ ಮಾಡಿದೆ. ವಿಶೇಷವೆಂದರೆ ಇದನ್ನು ಆಸೀಸ್ ನಾಯಕ ಪ್ಯಾಟ್ ಕ್ಯುಮಿನ್ಸ್, ಗ್ಲೆನ್ ಮ್ಯಾಕ್ಸ್ ವೆಲ್, ಏರಾನ್ ಫಿಂಚ್ ಲೈಕ್ ಮಾಡಿದ್ದಾರೆ!
									
										
								
																	ಫೈನಲ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಶತಕ ಸಿಡಿಸಿ ಟೀಂ ಇಂಡಿಯಾದಿಂದ ಜಯ ಕಸಿದುಕೊಂಡಿದ್ದರು. ಹೀಗಾಗಿ ರೋಹಿತ್, ಕೊಹ್ಲಿಯಂತಹ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಫೋಟೋವನ್ನು ಮಕ್ಕಳಂತೆ ಚಿತ್ರಿಸಿ ಟೀಂ ಇಂಡಿಯಾದ 11 ಆಟಗಾರರು ಟ್ರಾವಿಸ್ ಹೆಡ್ ಮಕ್ಕಳು ಎಂದು ಕುಹುಕ ಮಾಡಿದೆ.
									
											
							                     
							
							
			        							
								
																	ಈ ಫೋಟೋಗಳು ಭಾರತೀಯ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ವಿಶ್ವಕಪ್ ಫೈನಲ್ ಗೆದ್ದ ಬಳಿಕ ಇದೇ ಗ್ಲೆನ್ ಮ್ಯಾಕ್ಸ್ ವೆಲ್ ಭಾರತದ ಸ್ಟಾರ್ ಕ್ರಿಕೆಟಿಗ  ವಿರಾಟ್ ಕೊಹ್ಲಿ ಬಳಿ ಅವರ ಸಹಿ ಮಾಡಿದ ಜೆರ್ಸಿ ಕೇಳಿ ಪಡೆದಿದ್ದರು. ವಿಪರ್ಯಾಸವೆಂದರೆ ಇದೇ ಕ್ರಿಕೆಟಿಗರು ಭಾರತೀಯ ಕ್ರಿಕೆಟಿಗರನ್ನು ಕುಚೋದ್ಯ ಮಾಡುವ ವ್ಯಂಗ್ಯ ಚಿತ್ರವನ್ನು ಲೈಕ್ ಮಾಡಿದ್ದಾರೆ.